ಕಣ್ಣೂರು: ಅಬಕಾರಿ ಅಧಿಕಾರಿಗಳನ್ನು ಕಂಡು ಗಾಂಜಾ ಹಾಗೂ ಸ್ಕೂಟರನ್ನು ಉಪೇಕ್ಷಿಸಿ ಹಲವಾರು ಮಾದಕ ಪದಾರ್ಥ ಪ್ರಕರಣಗಳಲ್ಲಿ ಆರೋಪಿಯಾದ ಯುವಕ ಪರಾರಿಯಾಗಿದ್ದಾನೆ. ತಳಿಪರಂಬ್ ಏರಿಯಾತ್ ನಿವಾಸಿ ಶಮ್ಮಾಸ್ (27) ಪರಾರಿಯಾದ ಯುವಕ. ನಿನ್ನೆ ಮಧ್ಯಾಹ್ನ ಎಡಕ್ಕೊಂನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ತಳಿಪರಂಬ್ ಅಬಕಾರಿ ಇನ್ಸ್‌ಪೆಕ್ಟರ್ ಸತೀಶ್ ಹಾಗೂ ತಂಡವನ್ನು ನೋಡಿದ ಶಮ್ಮಾಸ್ ಸ್ಕೂಟರ್ ಹಾಗೂ ಗಾಂಜಾವನ್ನು ಉಪೇಕ್ಷಿಸಿ ಪರಾರಿಯಾಗಿದ್ದಾನೆ.
ಸ್ಕೂಟರ್‌ನಿಂದ 204 ಗ್ರಾಂ ಗಾಂಜಾವನ್ನು ಪತ್ತೆಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಶಮ್ಮಾಸ್‌ನ ಮನೆಗೂ ದಾಳಿ ನಡೆಸಲಾಗಿದೆ.







