ಪಾಕತಜ್ಞ ನಿಧನ

ಮಂಜೇಶ್ವರ: ವರ್ಕಾಡಿ ನಲ್ಲಂಗಿಪದವು ನಿವಾಸಿ, ಪಾಕತಜ್ಞ ಗೋಪಾಲಕೃಷ್ಣಯ್ಯ (ಬಾಬಣ್ಣ 62) ನಿಧನ ಹೊಂದಿದರು. ಶನಿವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ಈ ವೇಳೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮನೆ ಪರಿಸರದಲ್ಲಿ ಹಲವಾರು ವರ್ಷಗಳಿಂದ ಕ್ಯಾಟರಿಂಗ್ ನಡೆಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಶ್ವೇತ, ಜಯಲಕ್ಷ್ಮಿ, ಭವ್ಯ, ಅಳಿಯಂದಿರಾದ ರವೀಶ್, ಮಧು ಹೆಗ್ಡೆ, ಸಹೋದರ- ಸಹೋದರಿಯರಾದ ರಾಮ್‌ರಾವ್, ಪ್ರಕಾಶ್, ಭಾರತಿ, ಚಂದ್ರಪ್ರಕಾಶ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಂದೆ ಕಂಬಾರು ನಾರಾಯಣ್ಣ, ತಾಯಿ ರಾಜೀವಿ, ಸಹೋದರರಾದ ರಾಮಕೃಷ್ಣ, ಸತ್ಯಪ್ರಕಾಶ್ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page