ಪೈವಳಿಕೆ: ಎಡರಂಗ ಸರಕಾರ ನಡೆಸುತ್ತಿರುವ ಜನಕಲ್ಯಾಣ ಯೋಜನೆಗಳು ಹಾಗೂ ಪಂಚಾಯತ್ ಆಡಳಿತ ಸಮಿತಿ ನಡೆಸಿದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಎಡರಂಗದ ಉಮೇದ್ವಾರರು ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಪಡೆಯಲಿದ್ದಾರೆ ಎಂದು ಎಂ.ವಿ. ಜಯರಾಜನ್ ನುಡಿದರು. ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂ.ಸಿ. ಲಾಲ್‌ಬಾಗ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಬಿ. ಬಾಬು, ಎಡರಂಗದ ಪುತ್ತಿಗೆ ಜಿಲ್ಲಾ ಪಂಚಾಯತ್ ಡಿವಿಷನ್ ಅಭ್ಯರ್ಥಿ ಮೊಹಮ್ಮದ್ ಹನೀಫ, ಸಿಪಿಐ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್, ಸಿಪಿಎಂ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್, ಅಶೋಕ ಭಂಡಾರಿ, ಪುರುಷೋತ್ತಮ ಬಳ್ಳೂರು ಮಾತನಾಡಿದರು. ವಿಜಯ ಕುಮಾರ್ ಬಾಯಾರು ಸ್ವಾಗತಿಸಿದರು. ಪಂಚಾಯತ್‌ನಿಂದ ಸ್ಪರ್ಧಿಸುವ ಎಡರಂಗದ ಅಭ್ಯರ್ಥಿಗಳನ್ನು ಘೋಷಿಸಲಾಯಿತು.
ಚುನಾವಣಾ ಸಮಿತಿ ರೂಪೀಕರಿಸ ಲಾಯಿತು. ಪದಾಧಿಕಾರಿಗಳಾಗಿ ಸಂಜೀವ ಶೆಟ್ಟಿ ಕಳಾಯಿ, ಕೆ. ನಾರಾಯಣ ಶೆಟ್ಟಿ, ಕೆ. ನಾರಾಯಣ ಶೆಟ್ಟಿ ಕಳಾಯಿ, ಸಂಜೀವ ಶೆಟ್ಟಿ ಚಿಪ್ಪಾರು, ರಾಮಚಂದ್ರ ಮಾಸ್ಟರ್, ಯು. ಶ್ಯಾಮ್‌ಭಟ್, ವೆಂಕಪ್ಪ ಭಟ್, ಬಿ.ಎ. ಖಾದರ್, ಅಜಿತ್ ಎಂ.ಸಿ., ಅಶೋಕ್ ಭಂಡಾರಿ, ಲಾರೆನ್ಸ್, ಅಬ್ಬಾಸ್ ಮುನ್ನೂರು, ರೇಖಾ ಚಿಪ್ಪಾರು, ವಿನಯ ಕುಮಾರ್ ಬಾಯಾರು, ಅಬ್ದುಲ್ ಸಮದ್, ಎಂ. ಚಂದ್ರ ನಾಯ್ಕ್, ಚನಿಯ ಕೊಮ್ಮಂಗಳ ಸಹಿತ ೨೦೦ ಮಂದಿಯನ್ನು ಆಯ್ಕೆ ಮಾಡಲಾಯಿತು.







