ಮುಳ್ಳೇರಿಯ: ಮುಳ್ಳೇರಿಯದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮ ಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಚಾಂಪ್ಯನ್ ಪಟ್ಟ ಗೆದ್ದುಕೊಂಡಿದೆ. ಈ ಶಾಲೆ ಸತತ ಮೂರನೇ ಬಾರಿ ಚಾಂಪ್ಯನ್ಶಿಪ್ ಗೆದ್ದುಕೊಂಡು ಹ್ಯಾಟ್ರಿಕ್ ಸಾಧನೆಗೈದಿದೆ.
ಐದು ದಿನಗಳ ಕಾಲ ನಡೆದ ಕಲೋತ್ಸವದಲ್ಲಿ 243 ಅಂಕ ಗಳಿಸಿ ಚಾಂಪ್ಯನ್ ಪಟ್ಟವನ್ನು ಕಾಟುಕುಕ್ಕೆ ಶಾಲೆ ತನ್ನದಾಗಿಸಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ 203 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗ್ರೂಪ್ ಸ್ಪರ್ಧೆಗಳಾದ ಚೆಂಡೆ ಮೇಳ, ಬ್ಯಾಂಡ್ ಮೇಳ, ನಾಡನ್ ಪಾಟ್, ಗ್ರೂಪ್ ಡ್ಯಾನ್ಸ್, ವಂಜಿಪ್ಪಾಟ್, ಒಪ್ಪನ, ದಫ್ಮುಟ್, ದೇಶಭಕ್ತಿಗಾನ, ಮೂಕಾಭಿನಯ, ಅರಬನಮುಟ್ ಸ್ಪರ್ಧೆಗಳಲ್ಲಿ ಕಾಟುಕುಕ್ಕೆ ಶಾಲೆಗೆ ಎ ಗ್ರೇಡ್, ಕೋಲಾಟ ಸ್ಪರ್ಧೆಯಲ್ಲಿ ಬಿ ಗ್ರೇಡ್ ಲಭಿಸಿದೆ. ವೈಯಕ್ತಿಕ ಸ್ಪರ್ಧೆ ಗಳಾದ ಹಿಂದಿ ಕವಿತಾ ರಚನೆ, ಇಂಗ್ಲಿಷ್ ಪ್ರಬಂಧ, ಸಂಸ್ಕೃತ ಪ್ರಬಂಧ, ಹಿಂದಿ ಪ್ರಬಂಧ, ಸಂಸ್ಕೃತ ಕಂಠಪಾಠ, ಇಂಗ್ಲಿಷ್, ಕನ್ನಡ ಹಾಗೂ ಸಂಸ್ಕೃತ ಕಥೆ ಹಾಗೂ ಕವಿತೆ ರಚನೆ, ಪೆನ್ಸಿಲ್ ಡ್ರಾಯಿಂಗ್, ಕಾರ್ಟೂನ್, ಭರತ ನಾಟ್ಯ, ಲಲಿತಗಾನಂ, ಕೇರಳ ನಟನಂ, ಮೋಹಿನಿಯಾಟ್ಟ, ಜಾನಪದ ನೃತ್ಯ ಮೊದಲಾದ ಸ್ಪರ್ಧೆಗಳಲ್ಲಿ ಕಾಟುಕುಕ್ಕೆ ಶಾಲೆ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಹೈಸ್ಕೂಲ್ ವಿಭಾಗದಲ್ಲಿ ಜಿವಿ ಎಚ್ಎಸ್ಎಸ್ ಕಾರಡ್ಕ 225 ಅಂಕಗಳೊAದಿಗೆ ಚಾಂಪ್ಯನ್ ಪಟ್ಟ ಗೆದ್ದುಗೊಂಡಿದೆ. ಜಿವಿಎಚ್ಎಸ್ಎಸ್ ಮುಳ್ಳೇರಿಯ 198 ಅಂಕಗಳೊAದಿಗೆ ದ್ವಿತೀಯ, ಎಸ್ಎಸ್ಎಚ್ಎಸ್ ಶೇಣಿ 192 ಅಂಕಗಳೊAದಿಗೆ ತೃತೀಯ ಸ್ಥಾನ ಗಳಿಸಿದೆ.
ಎಲ್ಪಿ ಜನರಲ್ ವಿಭಾಗದಲ್ಲಿ ಎಚ್ಎಫ್ಎಎಸ್ಬಿಎಸ್ ಕುಂಬಳೆ, ಜಿಎಚ್ಎಸ್ ಪೆರಡಾಲ, ಎಯುಪಿಎಸ್ ಮವ್ವಾರು, ಎಂಎಸ್ಸಿ ಎಎಲ್ಪಿಎಸ್ ಪೆರಡಾಲ, ಎಜೆಬಿಎಸ್ ಪುತ್ತಿಗೆ ಎಂಬೀ ಶಾಲೆಗಳಿಗೆ ತಲಾ 65 ಅಂಕಗ ಳೊಂದಿಗೆ ಪ್ರಥಮ ಸ್ಥಾನ ಲಭಿಸಿದೆ. ಎಸ್ಜಿಎಎಲ್ಪಿಎಸ್ ಮುಳ್ಳೇರಿಯ, ಜಿವಿಎಚ್ಎಸ್ಎಸ್ ಕಾರಡ್ಕ, ಎಸ್ಎನ್ಎ ಎಲ್ಪಿಎಸ್ ಶಾಲೆ ಪೆರ್ಲ ಶಾಲೆಗಳು ತಲಾ 63 ಅಂಕಗಳೊAದಿಗೆ ದ್ವಿತೀಯ ಸ್ಥಾನ, ಶೇಣಿ ಎಸ್ಎಸ್ಎ ಯುಪಿಎಸ್ 61 ಅಂಕದೊAದಿಗೆ ತೃತೀಯ ಸ್ಥಾನ ಪಡೆದುಕೊಂಡಿವೆ.
ಯುಪಿ ಜನರಲ್ ವಿಭಾಗದಲ್ಲಿ ಎಯುಪಿಎಸ್ ಮವ್ವಾರು, ಎಚ್ಎಫ್ಎ ಎಸ್ಬಿಎಸ್ ಕುಂಬಳೆ, ಸೈಂಟ್ ಬಿಎಎಸ್ಬಿಎಸ್ ಬೇಳ, ಎಸ್ಎಸ್ಎ ಯುಪಿಎಸ್ ಶೇಣಿ ಎಂಬೀ ಶಾಲೆಗಳು ತಲಾ 78 ಅಂಕಗಳೊAದಿಗೆ ಪ್ರಥಮ ಜಿವಿಎಚ್ ಎಸ್ಎಸ್ ಕಾರಡ್ಕ, ಜೆಎಎಸ್ಬಿಎಸ್ ಮಾನ್ಯ, ಎಕೆಎಂಎAಎಯುಪಿಎಸ್ ಪೈಕ, ಎಯುಪಿಎಸ್ ಮುಳ್ಳೇರಿಯ ಎಂಬೀ ಶಾಲೆಗಳು ತಲಾ 76 ಅಂಕಗ ಳೊಂದಿಗೆ ದ್ವಿತೀಯ, ಜಿಎಚ್ಎಸ್ ಕೊಡ್ಯಮ್ಮೆ, ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ, ಜಿಎಸ್ಬಿಎಸ್ ಕುಂಬಳೆ ತಲಾ 74 ಅಂಕಗಳೊAದಿಗೆ ತೃತೀಯ ಸ್ಥಾನ ಗಳಿಸಿದೆ.
ಯುಪಿ ಸಂಸ್ಕೃತ ವಿಭಾಗದಲ್ಲಿ ಎಸ್ವಿಎ ಯುಪಿಎಸ್ ಸ್ವರ್ಗ 90 ಅಂಕಗಳೊAದಿಗೆ ಪ್ರಥಮ, ಎಸ್ಎನ್ಎಚ್ಎಸ್ ಪೆರ್ಲ 80 ಅಂಕಗಳೊAದಿಗೆ ದ್ವಿತೀಯ, ಎಂಎಸ್ಸಿಎಚ್ಎಸ್ ಪೆರಡಾಲ ನೀರ್ಚಾಲು, ಎಎಸ್ಬಿಎಸ್ ಕುಂಟಿ ಕಾನ ತಲಾ 83 ಅಂಕಗಳೊAದಿಗೆ ತೃತೀಯ ಸ್ಥಾನ ಗಳಿಸಿವೆ. ಹೈಸ್ಕೂಲ್ ವಿಭಾಗ ಸಂಸ್ಕೃತದಲ್ಲಿ ಎಂಎಸ್ಸಿ ಎಚ್ಎಸ್ ಪೆರಡಾಲ ನೀರ್ಚಾಲು 88 ಅಂಕ ಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. ಎಸ್ಎನ್ಎಚ್ಎಸ್ ಪೆರಡಾಲ 76 ಅಂಕಗಳೊAದಿಗೆ ದ್ವಿತೀಯ, ಎಸ್ಎಸ್ ಎಚ್ಎಸ್ ಶೇಣಿ 75 ಅಂಕಗಳೊAದಿಗೆ ತೃತೀಯ ಸ್ಥಾನ ಗಳಿಸಿದೆ.






