ಜಿಲ್ಲೆಯಾದ್ಯಂತ ಪೊಲೀಸ್ ಕಾರ್ಯಾಚರಣೆ: ತಲೆ ಮರೆಸಿಕೊಂಡವರೂ ಸೇರಿ 221 ವಾರಂಟ್ ಆರೋಪಿಗಳ ಸೆರೆ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಪೊಲೀಸರು ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಗಳು ಸೇರಿ ಒಟ್ಟು 221 ವಾರಂಟ್ ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿ ನೀಡಿದ ನಿರ್ದೇಶ ಪ್ರಕಾರ ಈ ಕಾರ್ಯಾಚರಣೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿ ೧೨೬ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ 3711 ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ. ಇದರ ಹೊರತಾಗಿ ಹೋಟೆಲ್ ಮತ್ತು ವಸತಿಗೃಹಗಳೂ ಸೇರಿದಂತೆ ೬೫ ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿ  ಪರಿಶೀಲಿಸಿದರು. ಮಾತ್ರವಲ್ಲ ಈ ಕಾರ್ಯಾಚರಣೆಯಲ್ಲಿ ಮೋಟಾರು ವಾಹನ ಕಾನೂನು ಪ್ರಕಾರ 1348 ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಗೂಂಡಾ ಮತ್ತು ಸಮಾಜದ್ರೋಹ  ತಡೆ ಯಾದಿಗೆ ಒಳಪಟ್ಟ 133 ಮಂದಿಯನ್ನು ತಪಾಸಣೆಗೊಳಪಡಿಸಲಾಯಿತು. ಅನಧಿಕೃತ ಮದ್ಯ ಸಾಗಾಟ ಸೇರಿದಂತೆ ಕಾನೂನುಬಾಹಿರವಾಗಿ ನಿಷೇಧಿತ ಅಮಲು ಪದಾರ್ಥ ಸಾಗಾಟಕ್ಕೆ ಸಂಬಂಧಿಸಿ ಒಂಭತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರ ಹೊರತಾಗಿ ಮಾದಕದ್ರವ್ಯ ಸೇವಿಸಿದ ಎಂಟು ಮಂದಿಯ ವಿರುದ್ಧ ಈ ಕಾರ್ಯಾಚರಣೆಯಲ್ಲಿ ಎನ್‌ಡಿಪಿಎಸ್ ಕಾನೂನು ಪ್ರಕಾರವೂ ಕೇಸು ದಾಖಲಿಸಲಾಗಿದೆ.

RELATED NEWS

You cannot copy contents of this page