ಕುಂಬಳೆ: ಬಂದ್ಯೋಡು ಬಳಿಯ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಯುವತಿಯ ಪತಿ, ಮಗು ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಮಚ್ಚಂಪಾಡಿ ನಿವಾಸಿ ಫಾತಿಮತ್ ಮಿರ್ಸಾನತ್ತ್ (28) ಮೃತಪಟ್ಟ ದುರ್ದೈವಿ. ಇವರ ಪತಿ ಹುಸೈನ್ ಸಅದಿ (35), ಪುತ್ರ ಶಾಹಿಂ ಅಬ್ದುಲ್ಲ (3), ಹುಸೈನ್ ಸ ಅದಿಯ ಸಹೋದರಿಯರಾದ ಜುಮಾನ, ಜಕಿಯ ಎಂಬಿವರು ಗಾಯ ಗೊಂಡಿ ದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಪೈಕಿ ಹುಸೈನ್ ಸಅದಿ ಹಾಗೂ ಶಾಹಿನ್ ಅಬ್ದುಲ್ಲ ಗಂಭೀರ ಗಾಯಗೊಂಡಿರುವುದಾಗಿ ತಿಳಿಸಲಾಗಿದೆ.
ನಿನ್ನೆ ರಾತ್ರಿ ೭.೪೫ರ ವೇಳೆ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಥಾರ್‌ಜೀಪು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಹುಸೈನ್ ಸಅದಿ ಹಾಗೂ ಕುಟುಂಬ ಆಲ್ಟೋ ಕಾರಿನಲ್ಲಿ ಕಾಸರಗೋಡಿಗೆ ತೆರಳಿ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಫಾತಿಮತ್ ಮಿರ್ಸಾನತ್ತ್‌ರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದರೂ ಜೀವ ರಕ್ಷಿಸ ಲಾಗಲಿಲ್ಲ. ಇವರ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಅಪಘಾತದಲ್ಲಿ ಕಾರು ಪೂರ್ಣವಾಗಿ ಹಾನಿಗೀಡಾಗಿದೆ.






