ಟ್ರಾನ್ಸ್‌ಫಾರ್ಮರ್‌ಗಳಿಂದ ಫ್ಯೂಸ್ ಕಿತ್ತೆಸೆದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ವಿದ್ಯುತ್ ಬಿಲ್‌ನ ಮೊತ್ತ ಪಾವತಿಸದ ಕಾರಣದಿಂದ ಮನೆಯ ವಿದ್ಯುತ್ ಸಂಪರ್ಕವನ್ನು ವಿದ್ಯುನ್ಮಂಡಳಿಯವರು ವಿಚ್ಛೇಧಿಸಿದ ದ್ವೇಷದಿಂದ ಟ್ರಾನ್ಸ್ ಫಾರ್ಮರ್‌ಗಳ ಫ್ಯೂಸ್‌ಗಳನ್ನು ಕಳಚಿ ತೆಗೆದು ಎಸೆದ ಪ್ರಕರಣದ ಆರೋಪಿ ಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಸೂರ್ಲು ಹೈದ್ರೋಸ್ ಜುಮಾ ಮಸೀದಿ ಬಳಿಯ  ಪಿ.ಎಂ. ಮುಹಮ್ಮದ್ ಮುನಾವರ್ (35) ಬಂಧಿತ ಆರೋಪಿಯಾಗಿದ್ದಾನೆ. ಕಾಸರಗೋಡು ಠಾಣೆ  ಎಸ್‌ಐ ಕೆ. ರಾಜು ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ವಿದ್ಯುನ್ಮಂಡಳಿಯ ನೆಲ್ಲಿಕುಂಜೆ ಮತ್ತು ಕಾಸರಗೋಡು ಸೆಕ್ಷನ್‌ಗಳಿಗೊಳಪಟ್ಟ 24 ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳ 170ಕ್ಕೂ ಹೆಚ್ಚು ಫ್ಯಾಸ್‌ಗಳನ್ನು ತೆಗೆದು  ಪೊದೆಗಳಿಗೆ  ಎಸೆದ ಪ್ರಕರ ಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಹೀಗೆ ಎಸೆಯಲ್ಪಟ್ಟ ಫ್ಯೂಸ್‌ಗಳ ಪೈಕಿ 22 ಫ್ಯೂಸ್‌ಗಳು ಹಾನಿಗೀಡಾಗಿವೆ. ಇದರಿಂದ ವಿದ್ಯು ನಂಡಳಿಗೆ 56,752 ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ವಿದ್ಯುನ್ಮಂಡಳಿ ನೆಲ್ಲಿಕುಂಜೆ ಸೆಕ್ಷನ್ ಕಚೇರಿ ಅಸಿಸ್ಟೆಂಟ್ ಇಂಜಿನಿಯರ್ ಕಾಸರಗೋಡು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಶುಕ್ರವಾರ ಕಾಸರಗೋಡು ನಗರ ಮತ್ತು  ಸಮೀಪ ಪ್ರದೇಶಗಳಲ್ಲಿ ಸತತ ೩ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮೊಟಕುಗೊಂಡಿತ್ತು. ಈ ಬಗ್ಗೆ ಹಲವರು ವಿದ್ಯುತ್ ಕಚೇರಿಗೆ ಕರೆ ಮಾಡಿ ತಿಳಿಸಿದ್ದರು. ಇದರಂತೆ ವಿದ್ಯುನ್ಮಂಡಳಿಯವರು ಟ್ರಾನ್ಸ್‌ಫಾ ರ್ಮರ್‌ಗಳನ್ನು ಪರಿಶೀಲಿಸಿದಾಗ  ಫ್ಯೂಸ್‌ಗಳನ್ನು ತೆಗೆದು ಸಮೀಪದ ಪೊದೆಗಳಿಗೆಸೆದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಸಿಸ್ಟೆಂ ಟ್ ಇಂಜಿನಿಯರ್ ನೀಡಿದ ದೂರಿನಂ ತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page