ಮುಸ್ಲಿಂ ಲೀಗ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಿರುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯನ್ನು ಮುಸ್ಲಿಂ ಲೀಗ್ ಪ್ರಕಟಿಸಿದೆ. ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಿಂದ ಅಸೀಸ್ ಕಳತ್ತೂರು, ಸಿವಿಲ್ ಸ್ಟೇಷನ್ ಡಿವಿಶನ್ ನಲ್ಲಿ ಪಿ.ಬಿ. ಶಫೀಕ್, ಚೆಂಗಳದಲ್ಲಿ ಜಸ್ನಾ ಮನಾಫ್ ಎಡನೀರು, ಬದಿಯಡ್ಕ (ಎಸ್‌ಸಿ)ದಲ್ಲಿ ಲಕ್ಷ್ಮಣ ಪೆರಿಯಡ್ಕ, ಮಂಜೇಶ್ವರದಲ್ಲಿ ಇರ್ಫಾನ ಇಕ್ಬಾಲ್, ಬೇಕಲ್‌ನಲ್ಲಿ ಶಹೀದ ರಾಶಿದ್, ಪೆರಿಯ ದಲ್ಲಿ ಜಿಶಾ ರಾಜು ಸ್ಪರ್ಧಿಸಲಿದ್ದಾರೆ.

ಮಂಜೇಶ್ವರ ಬ್ಲೋಕ್ ಪಂಚಾಯತ್ ಡಿವಿಶನ್‌ಗಳು ಹಾಗೂ ಅಭ್ಯರ್ಥಿಗಳು: ಕುಂಜತ್ತೂರು- ಮೊಹಮ್ಮದ್ ಹನೀಫ್ ಕುಚ್ಚಿಕ್ಕಾಡ್, ಬಡಾಜೆ- ಸಯ್ಯಿದ್ ಸೈಫುಲ್ಲಾ ತಂಙಳ್, ಪುತ್ತೂರು- ಬೀಫಾತು ಎಸ್.ಎ, ಮಂಜೇಶ್ವರ- ನಾಗೇಶ್ ಮಂಜೇಶ್ವರ, ಬಂದ್ಯೋಡು- ಅಸೀಸ್ ಮರಿಕೆ.

ಕಾಸರಗೋಡು ಬ್ಲೋಕ್  ಪಂಚಾಯತ್ ಡಿವಿಶನ್‌ಗಳು ಹಾಗೂ ಅಭ್ಯರ್ಥಿಗಳು: ಸಿವಿಲ್ ಸ್ಟೇಷನ್- ಕೆ. ಅಬ್ದುಲ್ಲಕುಂಞಿ ಚೆರ್ಕಳ, ಚೆಂಗಳ- ನ್ಯಾ| ನಾಸೀಫ ಎ.ಕೆ, ಪಾಡಿ- ಸಕೀನ ಅಬ್ದುಲ್ಲ ಹಾಜಿ, ಚೆಮ್ನಾಡ್- ಸಫೀನ, ತೆಕ್ಕಿಲ್- ಅನ್ವರ್ ಕೋಳಿಯಡ್ಕ, ಕಳನಾಡ್- ಮರಿಯ ಮಾಹಿನ್, ಕುಂಬಳೆ ರೈಲ್ವೇ ನಿಲ್ದಾಣ-  ಅಶ್ರಫ್ ಕಾರ್ಲೆ, ಮೇಲ್ಪರಂಬ- ಶಾಹಿದ್ ಅಪ್ಸಲ್.

ಕಾರಡ್ಕ ಬ್ಲೋಕ್ ಪಂಚಾಯತ್‌ನ ಪಡ್ಪು ಡಿವಿಶನ್‌ನಲ್ಲಿ ಹೈದರ್ ಅಲಿ ಪಿ.ಎಂ., ಕಾಞಂಗಾಡ್ ಬ್ಲೋಕ್ ಪಂ.ನ ಬೇಕಲದಲ್ಲಿ  ಹನೀಫ ಕುನ್ನಿಲ್, ಪರಪ್ಪ ಬ್ಲೋಕ್ ಪಂಚಾಯತ್‌ನ ಬಳಾಲ್ ಡಿವಿಶನ್‌ನಲ್ಲಿ ಸಫೀನ ಕೆ.ಪಿ. ಇಡತ್ತೋಡ್, ನೀಲೇಶ್ವರ ಬ್ಲೋಕ್ ಪಂ.ನ ತೃಕರಿಪುರ ಟೌನ್ ಡಿವಿಶನ್‌ನಲ್ಲಿ ಎಂಟಿಪಿ ಶಾಹಿನ, ಒಳವರದಲ್ಲಿ ವಿ.ಪಿ. ಸುನೀರ ಸ್ಪರ್ಧಿಸುವರು.

ಕಾಸರಗೋಡು ನಗರಸಭೆಯ ತುರುತ್ತಿ ವಾರ್ಡ್- ಶಾಹಿನ ಸಲೀಂ, ಹೊನ್ನೆಮೂಲೆ- ಬುಶ್ರಾ ಸಿದ್ದಿಕ್, ಚಾಲ- ಖದೀಜತ್ ಮುನೀಸ, ಕೊಲ್ಲಂಬಾಡಿ- ಸಜಿನ ರಿಯಾಸ್, ತಳಂಗರೆ ಬಾಂಗೋಡ್- ಶಾಹಿದಾ ಯೂಸುಫ್, ಪಳ್ಳಿಕ್ಕಾಲ್- ಕೆ.ಎನ್. ಹನೀಫ್, ತಳಂಗರೆ ಪಶ್ಚಿಮ- ಸಲೀಂ ಎನ್.ಎಂ, ಪಳ್ಳಂ- ಅಬ್ದುಲ್ ರಹ್ಮಾನ್ ಎನ್.ಎಚ್. ಎಂಬಿವರು ಸ್ಪರ್ಧಿಸಲಿರುವರು.

RELATED NEWS

You cannot copy contents of this page