ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆವರೆಗೆ 544 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ 32 ನಾಮಪತ್ರಗಳು ಸಲ್ಲಿಕೆಯಾಗಿದೆ. ಜಿಲ್ಲಾ ಪಂಚಾಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಹಾಗೂ ಉಪ ಚುನಾವಣಾಧಿಕಾರಿ ಎಡಿಎಂ ಪಿ. ಅಖಿಲ್ರಿಗೆ ಈ ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಕಾರಡ್ಕ ಬ್ಲೋಕ್ ಪಂಚಾಯತ್ನಲ್ಲಿ 19 ನಾಮಪತ್ರಗಳು, ಕಾಸರಗೋಡು ಬ್ಲೋಕ್ ಪಂಚಾಯತ್ನಲ್ಲಿ 3 ನಾಮಪತ್ರಗಳು, ಕಾಞಂಗಾಡ್ ಬ್ಲೋಕ್ ಪಂಚಾಯತ್ನಲ್ಲಿ 24 ನಾಮಪತ್ರಗಳನ್ನು ಸಲ್ಲಿಸಲಾಗಿದೆ.
ಕಾಸರಗೋಡು ನಗರಸಭೆಗೆ 11 ನಾಮಪತ್ರ ಸಲ್ಲಿಕೆಯಾಗಿದೆ. ಬಳಾಲ್ ಪಂಚಾಯತ್ನಲ್ಲಿ 22, ಬೇಡಡ್ಕ ಪಂ.ನಲ್ಲಿ 14, ಬಳ್ಳೂರು ಪಂ.ನಲ್ಲಿ 18, ಚೆಂಗಳ ಪಂ.ನಲ್ಲಿ 16, ದೇಲಂಪಾಡಿ ಪಂ.ನಲ್ಲಿ 14, ಎಣ್ಮಕಜೆ ಪಂ.ನಲ್ಲಿ 5, ಕಾರಡ್ಕ ಪಂ.ನಲ್ಲಿ 4, ಪುತ್ತಿಗೆ ಪಂ.ನಲ್ಲಿ 25, ವರ್ಕಾಡಿ ಪಂ.ನಲ್ಲಿ 3, ಕುಂಬ್ಡಾಜೆ ಪಂ.ನಲ್ಲಿ 31, ಕುಂಬಳೆ ಪಂ.ನಲ್ಲಿ 9, ಮೀಂಜ ಪಂ.ನಲ್ಲಿ 3, ಮುಳಿಯಾರು ಪಂ.ನಲ್ಲಿ 18, ಪೈವಳಿಕೆ ಪಂ.ನಲ್ಲಿ 1, ಚೆರ್ವತ್ತೂರು ಪಂ.ನಲ್ಲಿ 53, ಮಡಿಕೈ ಪಂ.ನಲ್ಲಿ 1, ಪಳ್ಳಿಕ್ಕೆರೆ ಪಂ.ನಲ್ಲಿ 2, ಪನತ್ತಡಿ ಪಂ.ನಲ್ಲಿ 13, ಪಿಲಿಕ್ಕೋಡ್ ಪಂ.ನಲ್ಲಿ 36, ಉದುಮ ಪಂ.ನಲ್ಲಿ 11, ವೆಸ್ಟ್ ಎಳೇರಿ ಪಂ.ನಲ್ಲಿ 3 ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಈ ತಿಂಗಳ 21ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, 22ರಂದು ಸೂಕ್ಷ್ಮ ಪರಿಶೀಲನೆ ನಡೆದು 24ರಂದು ನಾಮಪತ್ರ ಹಿಂತೆಗೆಯಲು ಅವಕಾಶವಿದೆ.







