ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ 16ನೇ ವಾರ್ಡ್ ಮಲ್ಲಂಗೈಯಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಸಾಕ್ಷಿ ಶೆಟ್ಟಿ ನಿನ್ನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಲಯ ಉಪಾಧ್ಯಕ್ಷ ವಿಜಯ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಂಗಲ್ಪಾಡಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ದಕ್ಷಿಣ ವಲಯ ಅಧ್ಯಕ್ಷೆ ರೇವತಿ ಕಮಲಾಕ್ಷ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಭಗವತಿ, ಕಿಶೋರ್ ಬಂದ್ಯೋಡು, ಮಂಡಲ ಉಪಾಧ್ಯಕ್ಷ ಬಾಲಕೃಷ್ಣ ಅಂಬಾರು, ಬಾಬು ಕೆ, ರಾಮಚಂದ್ರ ಬಲ್ಲಾಳ್, ಹರಿನಾಥ ಭಂಡಾರಿ, ಪದ್ಮಾ ಮೋಹನ್ದಾಸ್, ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.







