ಬದಿಯಡ್ಕ: ‘ಪಿಟ್’ ಎನ್ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಇನ್ನೋರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಸಾಲತ್ತಡ್ಕ ನಿವಾಸಿ ಇಕ್ಬಾಲ್ ಪಿ.ಎಂ. ಬಂಧಿತ ವ್ಯಕ್ತಿ. ಈತ ಬದಿಯಡ್ಕ, ಕಾಸರಗೋಡು ಮತ್ತು ಕರ್ನಾಟಕದಲ್ಲಿ ದಾಖಲಿಸಿಕೊಳ್ಳಲಾದ ಹಲವು ಮಾದಕ ದ್ರವ್ಯ ಸಾಗಾಟ ಪ್ರಕಣದ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2019ರಂದು 41.140 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಪ್ರಕರಣದಲ್ಲಿ ಹಾಗೂ 2025 ರಲ್ಲಿ ಮಾದಕ ದ್ರವ್ಯವಾದ 26,100 ಗ್ರಾಂ ಎಂಡಿಎಂಎ ಕೈವಶವಿರಿಸಿಕೊಂಡಿ ರುವುದಕ್ಕೆ ಸಂಬಂಧಿಸಿ ಬದಿಯಡ್ಕ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಈತ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಮೂಲಕ ಪಿಟ್ ಎನ್ಡಿಪಿಎಸ್ ಆಕ್ಟ್ಗೆ ಸಂಬಂಧಿಸಿ ಜಿಲ್ಲೆಯಲ್ಲಿ ಬಂಧಿತರಾದ ಸಂಖ್ಯೆ ಈಗ ೧೨ಕ್ಕೇರಿದೆ. ಬಂಧಿತನನ್ನು ನಂತರ ತಿರುವನಂತಪುರದ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ.
ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರು ನೀಡಿದ ನಿರ್ದೇಶದಂತೆ, ಕಾಸರಗೋಡು ಎಎಸ್ಪಿ ಡಾ. ನಂದಗೋಪಾಲ್ರ ಮೇಲ್ನೋಟದಲ್ಲಿ ಬದಿಯಡ್ಕ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ಎ. ಮತ್ತು ಎಸ್ಐ ಎಂ. ಸವ್ಯಸಾಚಿಯವರನ್ನೊಳಗೊಂಡ ಪೊಲೀಸರ ತಂಡ ಈ ಆರೋಪಿಯನ್ನು ಬಂಧಿಸಿದೆ.






