ವಾರಗಳ ಹಿಂದೆ ನಾಪತ್ತೆಯಾದ ಯುವತಿಗಾಗಿ ಮುಂದುವರಿದ ತೀವ್ರ ಶೋಧ

ಕಾಸರಗೋಡು: ವಾರಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಪತ್ತೆಗಾರಿರುವ ಶೋಧ ಕಾರ್ಯಾಚರಣೆಯನ್ನು ವಿದ್ಯಾನಗರ ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಪಾಡಿ ಗ್ರಾಮದ ಅದ್ರುಕುಳಿಯ ವಿನಯನ್ ಎಂಬವರ ಪತ್ನಿ ಲಕ್ಷ್ಮಿ (39) ಎಂಬವರು ಅಕ್ಟೋಬರ್ ೨೫ರಂದು ಬೆಳಿಗ್ಗೆ ಮನೆಯಿಂದ ಹೊರಹೋಗಿದ್ದು, ನಂತರ ಅವರು ಹಿಂತಿರುಗಿಲ್ಲವೆಂದು ಅವರ ಮನೆಯವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ  ಆರಂಭಿಸಿದರೂ, ಅವರನ್ನು ಪತ್ತೆಹಚ್ಚಲು ಈ ತನಕ ಸಾಧ್ಯವಾಗಿಲ್ಲ. ಆದ್ದರಿಂದ ಪತ್ತೆಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಆ ಕುರಿತಾದ ಮಾಹಿತಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ 04994 256766 ಅಥವಾ 9497970103 (ಠಾಣಾಧಿಕಾರಿ) ಎಂಬ ನಂಬ್ರಕ್ಕೆ ಕರೆದು ತಿಳಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

You cannot copy contents of this page