ಕಣ್ಣೂರು: ಸೆಂಟ್ರಲ್ ಜೈಲ್ನಲ್ಲಿ ರಿಮಾಂಡ್ನಲ್ಲಿದ್ದ ಆರೋಪಿಯನ್ನು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕತ್ತಿಯಿಂದ ಗಂಟಲಿಗೆ ಇರಿದು ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಯನಾಡ್ ಕೇನಿಚ್ಚಿರ ನಿವಾಸಿ ಜಿಲ್ಸನ್ ಮೃತಪಟ್ಟ ವ್ಯಕ್ತಿ. ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜಿಲ್ಸನ್ ಜೈಲಿನಲ್ಲಿದ್ದನು. ಈ ಮೊದಲು ಕೂಡಾ ಜಿಲ್ಸನ್ ಆತ್ಮಹತ್ಯಾಯತ್ನ ನಡೆಸಿದ್ದನು. ಆ ಬಳಿಕ ಕೌನ್ಸಿಲಿಂಗ್ ಕೂಡಾ ನೀಡಲಾಗಿತ್ತು. ಕಳೆದ ಐದು ದಿನದಿಂದ ಈತ ಜೈಲಿನಲ್ಲಿದ್ದು, ಪತ್ನಿಯ ಸಾವಿನ ಬಳಿಕ ಮಾನಸಿಕ ಅಸ್ವಸ್ಥನಾಗಿ ದ್ದನೆನ್ನಲಾಗಿದೆ. ನಿನ್ನೆ ರಾತ್ರಿ ಬೆಡ್ಶೀಟನ್ನು ಮೈಮೇಲೆ ಹೊದ್ದುಕೊಂಡು ಕತ್ತಿಯಿಂದ ಗಂಟಲನ್ನು ಕೊಯ್ದಿರುವುದಾಗಿ ಮಾಹಿತಿ ಲಭಿಸಿದೆ. ಬೆಡ್ಶೀಟ್ನಲ್ಲಿ ರಕ್ತದ ಕಲೆ ಗಮನಕ್ಕೆ ಬಂದ ಜೈಲ್ನ ಅಧಿಕಾರಿಗಳು ಆತನನ್ನು ಬಳಿಕ ಆಸ್ಪತ್ರೆಗೆ ತಲುಪಿಸಿದರಾದರೂ ಆ ವೇಳೆಗೆ ಸಾವು ಸಂಭವಿಸಿತ್ತು. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ವಾಟರ್ ಅಥೋರಿಟಿಯ ನೌಕರನಾಗಿದ್ದನು ಜಿಲ್ಸನ್.







