ಗುರುವಾಯೂರು ಕ್ಷೇತ್ರ ದರ್ಶನ ನಡೆಸಿ ವಧು-ವರರನ್ನು ಆಶೀರ್ವದಿಸಿದ ಪ್ರಧಾನಿ ಮೋದಿ

ಗುರುವಾಯೂರು: ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಇಂದು ಬೆಳಿಗ್ಗೆ ಗುರುವಾಯೂರು ಕ್ಷೇತ್ರ ಸಂದರ್ಶನ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.

ಕೇರಳೀಯ ಸಂಪ್ರದಾಯದಂತೆ ಕ್ಷೇತ್ರ ಸಂದರ್ಶಿಸಿದ ಪ್ರಧಾನಿಯವರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಚೆನಸು ನಂಬೂದಿರಿ, ಮುಜರಾಯಿ ಮಂಡಳಿ ಅಧ್ಯಕ್ಷ ಪ್ರೊ. ವಿಜಯನ್ ಮೊದಲಾದವರು ಸ್ವಾಗತಿಸಿದರು.  ಆ ವೇಳೆ ಗುರುವಾಯೂರು ಕ್ಷೇತ್ರ ಮತ್ತು ಪರಿಸರದಾದ್ಯಂತ ಬಿಗು ಭದ್ರತೆ ಏರ್ಪಡಿಸಲಾಯಿತು.  ಎರಡು ತಾಸುಗಳ ತನಕ ಶ್ರೀ ಕ್ಷೇತ್ರದಲ್ಲಿ ಉಳಿದುಕೊಂಡ ಪ್ರಧಾನಿಯವರು ದೇವರಿಗೆ ಶಿಲ್ಪವೊಂದನ್ನು ಕಾಣಿಕೆಯಾಗಿ ಸಮರ್ಪಿಸಿದರು. ತುಲಾಭಾರಸೇವೆಯನ್ನು ನಡೆಸಿದರು. ನಂತರ ಅದೇ ಕ್ಷೇತ್ರದಲ್ಲಿ  ಇಂದು ಬೆಳಿಗ್ಗೆ ನಡೆದ ನಟ ಸುರೇಶ್ ಗೋಪಿಯವರ ಪುತ್ರಿ ಭಾಗ್ಯರ ಮದುವೆ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸಿ ದರು.

ಜೊತೆಗೆ ಇಲ್ಲಿ ನಡೆದ ೧೦ ಜೋಡಿ ವಿವಾಹ ವಧೂ ವರರಿಗೆ ಕೂಡಾ ಪ್ರಧಾನಿ  ಆಶೀರ್ವದಿಸಿದರು. ನಂತರ ಅಲ್ಲಿಂದ ಸರಕಾರಿ ಅತಿಥಿಗೃಹಕ್ಕೆ ಹಿಂತಿರುಗಿದ ಪ್ರಧಾನಿ ಬಳಿಕ ತೃಪ್ರಯಾರ್ ಶ್ರೀರಾಮ ಕ್ಷೇತ್ರ ದರ್ಶನ ನಡೆಸಿದರು.

You cannot copy contents of this page