ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿ ಆಶ್ರಯದಲ್ಲಿ ವಿವೇಕಾನಂದ ಜಯಂತಿಯನ್ನು ದೇಶೀಯ ಯುವದಿನವನ್ನಾಗಿ ಪೆರಡಾಲ ಜಿ.ಎಚ್.ಎಸ್.ಎಸ್.ನಲ್ಲಿ ಆಚರಿಸಲಾಯಿತು. ಎನ್‌ಟಿಯು ಉಪಜಿಲ್ಲಾ ಅಧ್ಯಕ್ಷ ರಾಮಚಂದ್ರ ಪಿ. ಕಾರಡ್ಕ ಅಧ್ಯಕ್ಷತೆ ವಹಿಸಿದರು. ದಿನೇಶ್ ಪಡ್ರೆ ಉದ್ಘಾಟಿಸಿದರು. ಪುರುಷೋತ್ತಮ ಕುಲಾಲ್, ಕವಿತ, ದಿವ್ಯ, ಶರತ್ ಕುಮಾರ್, ಪ್ರಸಾದ್, ರಾಜೇಶ್, ನವಪ್ರಸಾದ್ ಭಾಗವಹಿಸಿದರು.







