ಕಾಸರಗೋಡು: ಬೇಕಲ ಫೆಸ್ಟ್‌ನಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಹಲವರು ಗಾಯಗೊಂಡಿರುವುದು ಹಾಗೂ ಪೊಯಿನಾಚಿ ನಿವಾಸಿಯಾದ ಯುವಕ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಫೆಸ್ಟ್‌ನ ಸಂಘಾಟಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾ ಯಿಸಿದ್ದಾರೆ. ರಜಾ ಕಾಲವಾದು ದರಿಂದ ಬೇಕಲ ಫೆಸ್ಟ್‌ಗೆ ಭಾರೀ ಜನರು ಸೇರುವ ಬಗ್ಗೆ ತಿಳಿದಿದ್ದರೂ ನೂಕು ನುಗ್ಗಲು ಉಂಟಾಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರು ವುದು ಜಿಲ್ಲಾಡಳಿತದ ಕರ್ತವ್ಯ ಲೋಪವಾಗಿದೆ. ನವಂಬರ್ 23ರಂದು ಕಾಸರಗೋಡು ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದರೂ ಅದರಿಂದ ಪಾಠ ಕಲಿಯದಿರುವುದು ದೌರ್ಭಾಗ್ಯಕರವೆಂದೂ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ.







