ಬದಿಯಡ್ಕ: ಮನೆಯವರೊಂದಿಗೆ ಸಿಟ್ಟುಗೊಂಡು ಹೊರಹೋದ 16ರ ಹರೆಯದ ಬಾಲಕಿಗೆ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ನೆಕ್ರಾಜೆ ನಿವಾಸಿಗಳಾದ ಇಬ್ಬರನ್ನು ಕಲ್ಲಿಕೋಟೆ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ಚರ್ಲಡ್ಕದ ಮೊಹಮ್ಮದ್ ಶಮೀಮ್, ನೆಕ್ರಾಜೆಯ ಮೊಹಮ್ಮದ್ ರೈಸ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ತಾಮರಶ್ಶೇರಿಯ ಮೊಹಮ್ಮದ್ ಸಾಲಿಹ್, ಶಬೀರ್ ಅಲಿ ಎಂಬಿವರನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ 16ರ ಹರೆಯದ ಬಾಲಕಿ ಮನೆಯವರೊಂದಿಗೆ ಸಿಟ್ಟುಗೊಂಡು ಕಲ್ಲಿಕೋಟೆ ಬೀಚ್‌ಗೆ ತಲುಪಿದ್ದಳು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿದ ಆರೋಪಿಗಳು ಸ್ನೇಹಿತನೋರ್ವನ ವಾಸ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ವಾಗಿ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ದೂರಲಾಗಿದೆ.







