ತರವಾಡು ಮನೆಯಿಂದ ಮಸೀದಿಗೆ ತೆರಳುತ್ತಿದ್ದ ಪಂಡಿತ ವಾಹನ ಢಿಕ್ಕಿ ಹೊಡೆದು ಮೃತ್ಯು

ಕುಂಬಳೆ: ಕರ್ನಾಟಕದ ಉಪ್ಪಿನಂಗಡಿ ಆತೂರಿನಲ್ಲಿರುವ ತರವಾಡು ಮನೆಗೆ ಕಾರ್ಯಕ್ರಮ ಕ್ಕೆಂದು ಹೋದ  ಪಂಡಿತ  ಮಸೀದಿಯಲ್ಲಿ ನಮಾಜಿಗಾಗಿ ತೆರಳುತ್ತಿದ್ದ ವೇಳೆ ವಾಹನ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ಕಟ್ಟತ್ತಡ್ಕ ಮುಹಿಮ್ಮಾತ್ ನಗರದಲ್ಲಿ ವಾಸಿಸುವ ಅಬ್ದುಲ್ ಖಾದರ್ ಸಖಾಫಿ (54) ಮೃತ ವ್ಯಕ್ತಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರು ಆತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮಸೀದಿಯಲ್ಲಿ ನಮಾಜಿಗಾಗಿ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಇವರಿಗೆ ಪಿಕಪ್ ವ್ಯಾನ್ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕಟ್ಟತ್ತಡ್ಕದ ಮನೆಗೆ ತಲುಪಿಸಲಾಯಿತು. ಬಳಿಕ ರಾತ್ರಿ 11 ಗಂಟೆ ವೇಳೆ ಕಟ್ಟತ್ತಡ್ಕ ಮುಹಿಮ್ಮಾತ್ ಪರಿಸರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಪತ್ನಿ ಸೈನಬ,ಮಕ್ಕಳಾದ  ಸೌದ, ಸ್ವಾಬಿರ, ಮುಬಶೀರ್, ಸಅದಿಯ, ತಾಜುನ್ನೀಸ,  ಅಳಿಯಂದಿ ರಾದ ಹಾಫಿಳ್ ಅಬ್ದುಲ್ ಅಬ್ದುಸ್ಸಲಾಂ, ಹಾರುನಿ ಬಂಬ್ರಾಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page