ಉಪ್ಪಳ: ಬೈಕ್ ತಡೆದು ನಿಲ್ಲಿಸಿ ವ್ಯಕ್ತಿಗೆ ಇರಿದ ಪ್ರಕರಣದಲ್ಲಿ ಆರೋಪಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ತೌಡುಗೋಳಿ ನಿವಾಸಿ ಅಬ್ದುಲ್ ಖಾದರ್ ತನ್ಸೀಫ್ (26) ಹಾಗೂ ಕಡಂಬಾರ್‌ನ ಅಬ್ದುಲ್ ರಜಾಕ್ (40) ಎಂಬಿವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಸ್ಪೆಷಲ್ ಸ್ಕ್ವಾಡ್ ಕರ್ನಾಟಕದ ತೌಡುಗೋಳಿಯಿಂದ ಸೆರೆಹಿಡಿದಿದೆ. ಆರೋಪಿಗಳು ಕಾರಿನಲ್ಲಿ ಸಂಚರಿಸು ತ್ತಿದ್ದ ವೇಳೆ ಸೆರೆಹಿಡಿಯಲಾಗಿದೆ. ಕಾರನ್ನು ಪೊಲೀಸರು ಪರಿಶೀಲಿಸಿ ದಾಗ ಅದರೊಳಗೆ ಮಾರಕಾಯು ಧಗಳು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪಳ ಕೋಡಿಬೈಲ್ ನಿವಾಸಿ ಜಕರಿಯ (61) ಎಂಬವರಿಗೆ ಇರಿದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೊನ್ನೆ ಸಂಜೆ ಜಕರಿಯ ಬೈಕ್‌ನಲ್ಲಿ ವರ್ಕಾಡಿ ಭಾಗದಿಂದ ಉಪ್ಪಳ ಭಾಗಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ ತಲುಪಿದ ಆರೋಪಿಗಳು ತಡೆದು ನಿಲ್ಲಿಸಿ ಹಣ ಕೇಳಿದ್ದರೆಂದೂ ಆದರೆ ಜಕರಿಯ ಹಣ ನೀಡದ ದ್ವೇಷದಿಂದ ಅವರಿಗೆ ಆರೋಪಿಗಳು ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಬಂಧಿತ ಆರೋಪಿಗಳನ್ನು ಇಂದು ನ್ಯಾಯಾ ಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.







