ಪೆರಡಾಲ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ: ಪಂಚಾಯತ್‌ನ 13ನೇ ವಾರ್ಡ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಬೀಜಂತಡ್ಕ ಪರಿಸರದಲ್ಲಿ ಜರಗಿತು. ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷ ಡಿ. ಶಂಕರ ಉದ್ಘಾಟಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ, ಬ್ಲೋಕ್ ಪಂ. ಸದಸ್ಯ ಮಹೇಶ್ ವಳಕುಂಜ, ಜಯರಾಮ್ ಚೆಟ್ಟಿಯಾರ್, ವಾರ್ಡ್ ಸಮಿತಿ ಅಧ್ಯಕ್ಷ ನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯ ರಾಮಪ್ಪ ಮಂಜೇಶ್ವರ, ಪಂ. ಸದಸ್ಯರಾದ ಶ್ಯಾಮ್ ಪ್ರಸಾದ್ ಸರಳಿ, ಮಧುಸೂದನ್, ಅವಿನಾಶ್ ಉಪಸ್ಥಿತರಿದ್ದರು.

ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ವಾರ್ಡ್ ಪ್ರತಿನಿಧಿ ಅಶ್ವಿನಿ ಕೆ.ಎಂ. ಅವರ  ಕ್ಯಾಲೆಂಡರ್  ಬಿಡುಗಡೆ ನಡೆಯಿತು. ರಾಮಚಂದ್ರ ಮಣಿಯಾಣಿ ಸ್ವಾಗತಿಸಿ, ರಘುನಾಥ ಬೀಜಂತಡ್ಕ ವಂದಿಸಿದರು.

RELATED NEWS

You cannot copy contents of this page