25 ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಸೆರೆ

ಹೊಸದುರ್ಗ: 2001ರಲ್ಲಿ ನಡೆದ ವೇಟ್ಟುಮ್ಮಲ್ ರತೀಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿಯಾಗಿ ಘೋಷಿಸಿದ ಆರೋಪಿಯನ್ನು 25 ವರ್ಷದ ಬಳಿಕ ಪ್ರತ್ಯೇಕ ತನಿಖಾ ತಂಡ ಬಂಧಿಸಿದೆ. ಕದಿರೂರು ನಿವಾಸಿ ಸಿ.ಎಚ್. ಅಶ್ರಫ್ (58) ಸೆರೆಯಾದ ವ್ಯಕ್ತಿ. ಕೊಲೆ ಕೃತ್ಯದ ಬಳಿಕ ಈತ 10 ವರ್ಷ ಕಾಲ ಮೈಸೂರು, ಬೆಂಗಳೂರು, ಮುಂಬೈ ಎಂಬೆಡೆಗಳಲ್ಲಿ ಹೋಟೆಲ್ ಕಾರ್ಮಿಕನಾಗಿ ತಲೆಮರೆಸಿಕೊಂ ಡಿದ್ದನು. ಬಳಿಕ 15 ವರ್ಷದಿಂದ ಪಯ್ಯನ್ನೂರಿನ ಸಮೀಪ ವಾಸಮಾಡಿ ಇಲ್ಲಿ ಗೂಡಂಗಡಿ ನಡೆಸುತ್ತಿದ್ದನು. ಇಲ್ಲಿಗೆ ಪೊಲೀಸರ ಸಹಿತ ಹಲವಾರು ಮಂದಿ ತಲುಪಿ ಆಹಾರ ಸೇವಿಸುತ್ತಿದ್ದರು. ಈ ಮಧ್ಯೆ ಸಿಟಿ ಪೊಲೀಸ್ ಕಮೀಷನರ್ ವಿಜಯ್ ಭರತ್ ರೆಡ್ಡಿ ರೂಪೀಕರಿಸಿದ ಪ್ರತ್ಯೇಕ ತನಿಖಾ ತಂಡ ಈತನಿಗಾಗಿ ತನಿಖೆ ತೀವ್ರ ಗೊಳಿಸಿತ್ತು. ವಿವಿಧ ಗುಂಪುಗಳಾಗಿ ತಂಡ ಚೆನ್ನೈ, ಮುಂಬೈ, ಬೆಂಗಳೂರು, ಮೈಸೂರುಗಳಲ್ಲೆಡೆ ತನಿಖೆ ನಡೆಸಿದ್ದು, ಕೊನೆಯದಾಗಿ ಈತ ಪಯ್ಯನ್ನೂರಿನಲ್ಲಿ ಗೂಡಂಗಡಿ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತು.

RELATED NEWS

You cannot copy contents of this page