ಹೆತ್ತವರ ಜಗಳ ಮಕ್ಕಳಿಗೆ ತೊಂದರೆಯಾಗಿ ಪರಿಣಮಿಸುತ್ತಿದೆ- ಮಹಿಳಾ ಆಯೋಗ ಸದಸ್ಯೆ ಪಿ. ಕುಂಞಾಯಿಷ

ಕಾಸರಗೋಡು: ವಿವಾಹ ಸಂಬಂಧದಲ್ಲಿ ಕಂಡುಬರುವ ಸಮಸ್ಯೆಗಳು ವ್ಯಕ್ತಿಯ ಸಮಸ್ಯೆ ಮಾತ್ರವಲ್ಲದೆ ಸಾಮಾಜಿಕ ವಿಪತ್ತಾಗಿ ಬದಲಾಗುತ್ತಿದೆ ಎಂದು ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ಪಿ. ಕುಂಞಾಯಿಷ ನುಡಿದರು. ಕಾಸರಗೋಡು ಕಲೆಕ್ಟ್ರೇಟ್ ನಲ್ಲಿ ಜರಗಿದ ಜಿಲ್ಲಾ ಮಟ್ಟದ ಸಿಟ್ಟಿಂಗ್‌ನಲ್ಲಿ ಅವರು ಮಾತನಾಡುತ್ತಿ ದ್ದರು. ಸಿಟ್ಟಿಂಗ್‌ನಲ್ಲಿ 36 ದೂರುಗಳನ್ನು ಪರಿಗಣಿಸಲಾಗಿದ್ದು, 8ಕ್ಕೆ ತೀರ್ಪು ಕಲ್ಪಿಸಲಾಗಿದೆ. 4 ದೂರುಗಳನ್ನು ಪೊಲೀಸ್ ವರದಿಗಾಗಿ ಕಳುಹಿಸಿಕೊಡ ಲಾಗಿದೆ. 24 ದೂರುಗಳನ್ನು ಮುಂದಿನ ಸಿಟ್ಟಿಂಗ್‌ನಲ್ಲಿ ಪರಿಗಣಿಸಲಾಗುವುದು.

ತಂದೆ ಹಾಗೂ ತಾಯಿ ಮಧ್ಯೆಗಿನ ಜಗಳಗಳು ಮಕ್ಕಳ ಮಾನಸಿಕ ಆರೋಗ್ಯ ದಲ್ಲಿ ಅತ್ಯಂತ ತೊಂದರೆ ಉಂಟುಮಾ ಡುತ್ತಿದೆ ಎಂದು ಆಯೋಗದ ಸದಸ್ಯೆ ನುಡಿದರು. ಇದು ಸಾಮಾಜಿಕ ವಿಪತ್ತಾಗಿ ಬದಲಾಗುತ್ತಿದೆ. ಪರಸ್ಪರ ಸಹಿಷ್ಣುತೆ ಇಲ್ಲದಿರುವುದು, ವಿಶ್ವಾಸವಿಲ್ಲದಿರುವುದು, ಆರ್ಥಿಕ ಒತ್ತಡ, ತೃತೀಯ ವ್ಯಕ್ತಿಯ ಮಧ್ಯಪ್ರವೇಶ ಎಂಬೀ ವಿಷಯಗಳು ವಿವಾಹ ಸಂಬಂ ಧದಲ್ಲಿ ಉಂಟಾಗುವ ಸಮಸ್ಯೆಗಳನ್ನು ಇನ್ನಷ್ಟು ಜಟಿಲ ಗೊಳಿಸುತ್ತದೆ. ಇದಕ್ಕೆ ಸಾಮಾಜಿಕ ಜಾಗೃತಿ ಅಗತ್ಯವಾಗಿದೆ. ಪ್ರಾಯದವರನ್ನು ಹೊರಗಿಟ್ಟು ಅವರಿಗೆ ಆಹಾರ, ಚಿಕಿತ್ಸೆ, ಔಷಧವನ್ನು ನಿಷೇಧಿಸುವಂತಹ ಕಾರ್ಯಗಳು ಸಮಾಜದಲ್ಲಿ ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ. ಆಯೋಗದ ನೌಕರರಾದ ಅಫ್ಸಲ್ ರಾಫಿ, ಸತೀಶ್ ಕುಮಾರ್ ಎಂಬಿವರು ಸಿಟ್ಟಿಂಗ್‌ನಲ್ಲಿ ಭಾಗವಹಿಸಿದರು.

You cannot copy contents of this page