ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಯುವತಿ, ಪತಿಗೆ ತಂಡದಿಂದ ಹಲ್ಲೆ

ಕಣ್ಣೂರು: ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ ಯುವತಿ ಹಾಗೂ ಆಕೆಯ ಪತಿಗೆ ತಂಡ ವೊಂದು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ೧೨ ಮಂದಿ ಸಿಪಿಎಂ ಕಾರ್ಯ ಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೆರಳಶ್ಶೇರಿ ಗ್ರಾಮ ಪಂಚಾಯತ್‌ನ ೧೩ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುಂಡಲ್ಲೂರು ವಳಪ್ಪಿಲ್‌ನ ಕೆ. ರೀಜ (38), ಪತಿ ಎನ್. ಶೈಜು (48) ಎಂಬಿವರ ಮೇಲೆ ತಂಡ ಹಲ್ಲೆಗೈದಿದೆ. ಮೊನ್ನೆ ರಾತ್ರಿ 7.30 ರ ವೇಳೆ ರೀಜರ ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ ಪತಿಯ ಮೇಲೆ ಹಲ್ಲೆಗೈದಿದೆ. ಅದನ್ನು ತಡೆಯಲೆತ್ನಿಸಿದಾಗ ರೀಜರಿಗೂ ತಂಡ ಹಲ್ಲೆಗೈದಿರುವುದಾಗಿ ದೂರ ಲಾಗಿದೆ. ಅಲ್ಲದೆ ಮನೆಯ ಕಿಟಿಕಿ ಗಾಜುಗಳನ್ನು ತಂಡ ಹಾನಿಗೈದಿದೆ. ಸಿಪಿಎಂನ  ಶಕ್ತಿಕೇಂದ್ರವಾದ 13ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ ರೀಜ ದ್ವಿತೀಯ ಸ್ಥಾನ ಗಳಿಸಿದ್ದರು. ಇದರ ದ್ವೇಷದಿಂದ ತಂಡ ಹಲ್ಲೆಗೈದಿರು ವುದಾಗಿ ದೂರಲಾಗಿದೆ.

RELATED NEWS

You cannot copy contents of this page