ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧ ಕಲೆಕ್ಟರೇಟ್ ಪರಿಸರದಲ್ಲಿ ಜನಪ್ರತಿನಿಧಿಗಳಿಂದ ಪ್ರತಿಭಟನೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಸ್ಥಾಪಿಸಿರುವ ಟೋಲ್ ಪ್ಲಾಸಾದಲ್ಲಿ ಅನ್ಯಾಯವಾಗಿ ಟೋಲ್ ಸಂಗ್ರಹಿಸುವುದನ್ನು ಪ್ರತಿಭಟಿಸಿ ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮಾರ್ಚ್ ಹಾಗೂ ಧರಣಿ ನಡೆಸಿದರು.  ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದು, ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು.  ಸಿಪಿಎಂ ಕುಂಬಳೆ ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಸ್ವಾಗತಿಸಿದರು. ಎಲ್‌ಡಿಎಫ್ ಕನ್ವೀನರ್  ಕೆ.ಪಿ.ಸತೀಶ್ಚಂದ್ರನ್, ಯುಡಿಎಫ್ ಕನ್ವೀನರ್ ಎ. ಗೋವಿಂದನ್ ನಾಯರ್, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಕಾಸರಗೋಡು ನಗರಸಭಾ ಚೆಯರ್ ಪರ್ಸನ್ ಶಾಹಿನಾ ಸಲೀಂ, ಬ್ಲೋಕ್ ಪಂ. ಅಧ್ಯಕ್ಷ ಕೆ.ಕೆ. ಅಬ್ದುಲ್ಲ ಕುಂಞಿ ಚೆರ್ಕಳ, ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಸೈಫುದ್ದೀನ್ ತಂಙಳ್, ಕುಂಬಳೆ ಪಂ. ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಚೆಂಗಳ ಪಂ. ಅಧ್ಯಕ್ಷ  ವಸಂತನ್ ಅಜಕ್ಕೋಡ್ ಮೊದಲಾದವರು ಭಾಗವಹಿಸಿದರು.

You cannot copy contents of this page