ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಸಮ್ಮೇಳನಕ್ಕೆ ಇಂದು ಸಂಜೆ ಚಾಲನೆ

ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ತಿನ 47ನೇ ರಾಜ್ಯ ಸಮ್ಮೇಳನಕ್ಕೆ ಎನ್‌ಟಿಯು ಜಿಲ್ಲಾ ಕಾರ್ಯಾಲಯದಲ್ಲಿ  ಇಂದು ಸಂಜೆ ೫ ಗಂಟೆಗೆ ಸಂಘಟನೆಯ ಸಂಪೂರ್ಣ ರಾಜ್ಯ ಸಮಿತಿಯ ಸಭೆಯೊಂದಿಗೆ ಚಾಲನೆ ದೊರಕಲಿದೆ. ಈ ಸಭೆಯನ್ನು ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹಕ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸುವರು. ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸುವರು. ನಾಳೆ ಬೆಳಿಗ್ಗೆ 9.30ಕ್ಕೆ  ಕಾಸರಗೋಡು ಟೌನ್ ಹಾಲ್ (ಜಯಕೃಷ್ಣನ್ ಮಾಸ್ತರ್ ನಗರ)ದಲ್ಲಿ ರಾಜ್ಯಾಧ್ಯಕ್ಷೆ ಕೆ. ಸ್ಮಿತ  ಧ್ವಜಾರೋಹಣ ಗೈಯ್ಯುವರು. ನಂತರ ನಡೆಯುವ ಪ್ರತಿನಿಧಿ ಸಭೆಯನ್ನು ಎಬಿಆರ್‌ಎಸ್‌ಎಂನ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಉದ್ಘಾಟಿಸುವರು. ಬಳಿಕ 11.45ಕ್ಕೆ ನಡೆಯುವ ಸಮನ್ವಯ ಸಭೆಯನ್ನು ಆರ್‌ಎಸ್‌ಎಸ್ ಉತ್ತರ ಕೇರಳ ಪ್ರಾಂತ್ ಬೌಧಿಕ್ ಶಿಕ್ಷಣ್ ಪ್ರಮುಖ್ ಎಂ. ಬಾಲಕೃಷ್ಣನ್ ಉದ್ಘಾಟಿಸುವರು. ಎನ್‌ಟಿಯು ರಾಜ್ಯ ಉಪಾಧ್ಯಕ್ಷ ಕೆ. ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸಿ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ಸಂಘಟನಾ ಸಮ್ಮೇಳನ ನಡೆಯಲಿದ್ದು, ಸಂಘಟನಾ ರಾಜ್ಯ ಉಪಾಧ್ಯಕ್ಷ ಪಾರಂಗೋಡು ಬಿಜುರ ಅಧ್ಯಕ್ಷತೆಯಲ್ಲಿ ಆರ್‌ಎಸ್‌ಎಸ್‌ನ ದಕ್ಷಿಣ ಕೇರಳ ಬೌಧಿಕ್ ಶಿಕ್ಷಣ್ ಪ್ರಮುಖ್ ಪಿ. ಉಣ್ಣಿಕೃಷ್ಣನ್ ಉದ್ಘಾಟಿಸುವರು. 8 ಗಂಟೆಗೆ ಅನೌಪಚಾರಿಕ ಸಭೆ ನಡೆಯಲಿದೆ.

೨೪ರಂದು ಬೆಳಿಗ್ಗೆ 9.30ಕ್ಕೆ ಸೋಪಾನ ಸಂಗೀತ, 9.45ಕ್ಕೆ ನಡೆಯುವ ಸಮ್ಮೇಳನವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸುವರು. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸೇರಿದಂತೆ ಹಲವರು ಭಾಗವಹಿಸಿ ಮಾತನಾಡುವರು. 11.30ಕ್ಕೆ ಬೀಳ್ಕೊಡುಗೆ ಸಮಾರಂಭ ನಡೆಯಲಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ಉದ್ಘಾಟಿಸುವರು. ಈ ಸಭೆಯಲ್ಲಿ ಈ ವರ್ಷ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದುವ ಸಂಘಟನೆಯ ಸದಸ್ಯರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 2 ಗಂಟೆಗೆ ಶಿಕ್ಷಣ ಸಮ್ಮೇಳನ ನಡೆಯಲಿದ್ದು, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲ್‌ಗುರ್ ಉದ್ಘಾಟಿಸುವರು. ಇದೇ ವಿಶ್ವವಿದ್ಯಾಲ ಯದ ಡೈರೆಕ್ಟರ್ ಆಫ್ ಫಿಸಿಕ್ಸ್ ಪಿ. ಶ್ರೀಕುಮಾರ್ ಪ್ರಧಾನ ಭಾಷಣ ಮಾಡುವರು. ಸಂಜೆ 3 ಗಂಟೆಗೆ ಸಮಾರೋಪ ಸಭೆ ನಡೆಯಲಿದ್ದು, ಆರ್‌ಎಸ್‌ಎಸ್ ದಕ್ಷಿಣ ಕೇರಳ ಪ್ರಾಂತ್ಯ ಬೌಧಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸುವರು. ನಂತರ ಸಂಘಟನೆಯ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಸಮ್ಮೇಳನದಂಗವಾಗಿ ಅಂದು ಸಂಜೆ 4 ಗಂಟೆಗೆ ಸಂಘಟನೆಯ ಕಾರ್ಯಕರ್ತರಿಂದ ನಗರದಲ್ಲಿ ಮೆರವಣಿಗೆ  ನಡೆಯಲಿದೆ. ಇದು ಟೌನ್‌ಹಾಲ್‌ನಿಂದ ಆರಂಭಗೊಂಡು ನಗರಪ್ರದಕ್ಷಿಣೆ ನಡೆಸಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಹೊಂದಲಿದೆ. ಬಳಿಕ  ಬಹಿರಂಗ ಅಧಿವೇಶನ ನಡೆಯಲಿದ್ದು, ಬಿಜೆಪಿ ರಾಜ್ಯ ವಕ್ತಾರ ಟಿ.ಪಿ. ಜಯಚಂದ್ರನ್ ಮಾಸ್ತರ್ ಉದ್ಘಾಟಿಸುವರು. ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದಾಗಿ 1500ರಷ್ಟು ಪ್ರತಿನಿಧಿಗಳು ಭಾಗವಹಿಸಲಿರುವರೆಂದು ಈ ಪ್ರಯುಕ್ತ ಕರೆಯಲಾದ ಸುದ್ಧಿಗೋಷ್ಠಿ ಯಲ್ಲಿ ಸಂಘಟನೆಯ ರಾಜ್ಯ ಪದಾಧಿ ಕಾರಿಗಳಾದ ಪಿ. ರಮೇಶ್, ಟಿ. ಕೃಷ್ಣನ್, ಟಿ. ಅನೂಪ್ ಕುಮಾರ್, ಎಂ. ರಂಜನ್ ಮತ್ತು ಕೆ. ಅಜಿತ್ ಕುಮಾರ್ ತಿಳಿಸಿದ್ದಾರೆ.

You cannot copy contents of this page