ಮಂಜೇಶ್ವರ: ೨೦೧೦ ಜುಲೈ ೪ರಂದು ಮೂವಾಟುಪುಳ ಕಾಲೇಜು ಪ್ರಾಧ್ಯಾಪಕ ಟಿ.ಜೆ. ಜೋಸೆಫ್ರ ಕೈ ತುಂಡರಿಸಿದ ಪ್ರಕರಣದ ಆರೋಪಿ ಸವಾದ್ ವಿವಾಹಿತನಾದ ಮಂಜೇಶ್ವರ ನಿವಾಸಿಯಾದ ಯುವತಿಯ ಮನೆಗೆ ಮತ್ತು ತಲೆಮರೆಸಿಕೊಳ್ಳಲು ಆತನಿಗೆ ಸಹಾಯವೊದಗಿಸಿದ ಇತರರ ಕುರಿತಾದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬೆಳಿಗ್ಗೆ ಮಂಜೇಶ್ವರ ಪರಿಸರ ಪ್ರದೇಶದಲ್ಲಿ ದಾಳಿ ನಡೆಸಿದೆ. ದಾಳಿ ನಡೆಸಿದ ತಂಡದಲ್ಲಿ ಕೇರಳ ಮತ್ತು ಕರ್ನಾಟಕದ ಎನ್ಐಎ ಘಟಕದ ಅಧಿಕಾರಿಗಳು ತಂಡದಲ್ಲಿ ಒಳಗೊಂಡಿದ್ದರು.
ಅಧ್ಯಾಪಕನ ಕೈ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿ ೧೩ ವರ್ಷಗಳ ನಂತರ ಮಟ್ಟನ್ನೂರಿನಿಂದ ಬಂಧಿತನಾಗಿ ಬಳಿಕ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿದ್ದ ಆರೋಪಿ ಸವಾದ್ನನ್ನು ಹೆಚ್ಚಿನ ತನಿಖೆಗಾಗಿ ಎನ್ಐಎ ೧೦ ದಿನಗಳ ತನಕ ತಮ್ಮ ವಶಕ್ಕೆ ಪಡೆದುಕೊಂಡಿದೆ.







