ಮುಳ್ಳೇರಿಯ ಬಳಿ ವಾಹನ ಅಪಘಾತ ಯುವಕ ದಾರುಣ ಮೃತ್ಯು

ಮುಳ್ಳೇರಿಯ: ಇಲ್ಲಿಗೆ ಸಮೀಪದ ದೇಲಂಪಾಡಿಯಲ್ಲಿ ಇಂದು ಬೆಳಿಗ್ಗೆ ಸಂಭವಿ ಸಿದ ವಾಹನ ಅಪಘಾತ ದಲ್ಲಿ ಓರ್ವ ಯುವಕ ದಾರುಣವಾಗಿ ಮೃತ ಪಟ್ಟ ಘಟನೆ ನಡೆದಿದೆ.  ಆದೂರು ಸಿಎ ನಗರ ಬೀಟಿಯಡಿ ನಿವಾಸಿ ಖಾದರ್-ರಮ್ಲ ದಂಪತಿ ಯ ಪುತ್ರ  ರೈಸ್ ಅನ್ವರ್ (೧೮) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಇವರು ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ರೈಸ್ ಅನ್ವರ್  ಮುಳ್ಳೇರಿ ಯದ ತರಕಾರಿ ಅಂಗಡಿಯೊಂದರಲ್ಲಿ ನೌಕರನಾಗಿದ್ದರು. ಇವರು    ಇಂದು ಬೆಳಿಗ್ಗೆ ಬೇರೊಬ್ಬರ ಸ್ಕೂಟರ್ ನಲ್ಲಿ ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದಾಗ  ಅಪಘಾತ ಸಂಭವಿಸಿದೆಯೆಂದು ಹೇಳಲಾ ಗುತ್ತಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

RELATED NEWS

You cannot copy contents of this page