ಮಂಜೇಶ್ವರ: ತೀರ್ಥ ಸಮಾನ ವಾದ ನೀರನ್ನು ಕಲುಷಿತಗೊಳಿಸಿ ಜನರಿಗೆ ಕುಡಿಯಲು ಕೂಡಾ ಸಾಧ್ಯವಾ ಗದ ಸ್ಥಿತಿಗೆ ತಲುಪಿಸುತ್ತಿರುವ ಸ್ಥಳೀಯ ಕಂಪೆನಿಯೊಂದರ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 8 ವರ್ಷಗಳಿಂದ ಇಲ್ಲಿ ಕಾರ್ಯಾಚರಿಸು ತ್ತಿರುವ ಯುನೈಟೆಡ್ ಸೀ ಫುಡ್ ಕಾರ್ಖಾನೆ ವಿರುದ್ಧ ಸ್ಥಳೀಯರು ಪ್ರತಿಭಟಿಸಿದ್ದಾರೆ. ನಿರಂತರ ವಾಯು, ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಜನವಾಸ ಈ ಸ್ಥಳದಲ್ಲಿ ಅಪಾಯಕಾರಿಯಾಗಿ ಬದಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸೂಕ್ತ ಕಾನೂನು ಕ್ರಮಗಳನ್ನು ಪಾಲಿಸದೆ ಮೀನಿನ ತ್ಯಾಜ್ಯವನ್ನು ಹಾಗೂ ಮಲಿನ ಜಲವನ್ನು ಬಹಿರಂಗವಾಗಿ ಉಪೇಕ್ಷಿಸುತ್ತಿರುವುದು ಇಲ್ಲಿನ ನೀರು ಹಾಗೂ ವಾಯುಮಾ ಲಿನ್ಯಕ್ಕೆ ಕಾರಣವಾಗುತ್ತಿದೆ. ಇಲ್ಲಿನವರಿಗೆ ಹಲವು ರೋಗಗಳ ಭೀತಿ ಎದುರಾಗಿದೆ. ದುರ್ವಾಸನೆ ಸಹಿಸಲಸಾಧ್ಯವಾಗಿ ಫ್ಯಾಕ್ಟರಿಯ ಸಮೀಪ ನಿವಾಸಿಗಳು ಕೆಲವರು ಮನೆ ತೊರೆದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಕಾರ್ಖಾನೆಯನ್ನು ಮುಚ್ಚಬೇಕೆಂದು ಆಗ್ರಹಿಸಿ ನೀಡಿದ ಅರ್ಜಿ ನ್ಯಾಯಾಲಯದಲ್ಲಿರು ವುದಾಗಿಯೂ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿ ದ್ದಾರೆ. ಕಮಾಂಡರ್ ವಿಜಯ ಕುಮಾರ್, ಪಂಚಾಯತ್ ಸದಸ್ಯ ಭವೇಶ್ ಬೆಂಗರೆ ಪ್ರತಿಭಟನೆಗೆ ನೇತೃತ್ವ ನೀಡಿದ್ದು, ಕಣ್ವತೀರ್ಥ ನಾಗರಿಕ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ಮುಂದೆಯೂ ತೀವ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.







