ವಿಷಾಹಾರ: ಇಬ್ಬರು ಮೃತ್ಯು; ಹೋಟೆಲ್‌ಗೆ ಬೀಗ

ತಿರುವನಂತಪುರ: ವಿಳಿಂಞದ ಹೋಟೆಲ್‌ನಿಂದ ಆಹಾರ ಸೇವಿಸಿದ ಇಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂ, ನಿಲಾಮೇಲ್ ನಿವಾಸಿಗಳಾದ ರಶೀದ ಬೀವಿ, ಅಳಿಯ ಶಾಜಿ ಎಂಬಿವರು ಮೃತಪಟ್ಟವರು. ವಿಷಾಹಾರ ಮರಣಕ್ಕೆ ಕಾರಣವೆಂದು ಶಂಕಿಸಲಾಗಿದೆ. ನಿನ್ನೆ ಸಂಜೆ ವಿಳಿಂಞದ ಹೋಟೆಲ್‌ನಿಂದ ರಶೀದ ಬೀವಿ ಹಾಗೂ ಶಾಜಿ ಸಹಿತದ ಆರು ಮಂದಿ ಆಹಾರ ಸೇವಿಸಿದ್ದರು. ಇವರಲ್ಲಿ ನಾಲ್ಕು ಮಂದಿಗೆ ದೈಹಿಕ ಅಸ್ವಸ್ಥತೆಗಳು ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ರಶೀದ ಬೀವಿ ಹಾಗೂ ಶಾಜಿಯವರ ಜೀವ ಉಳಿಸ ಲು ಸಾಧ್ಯವಾಗಲಿಲ್ಲ. ಶಾಜಿಯ ವರ ಪತ್ನಿ ಸಜಿನ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇತರ ಮೂರು ಮಂದಿ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮಾಹಿತಿ ತಿಳಿದು ತಲುಪಿದ ಪೊಲೀಸರು ಹೋಟೆಲ್‌ಗೆ ಬೀಗ ಹಾಕಿದ್ದಾರೆ.

RELATED NEWS

You cannot copy contents of this page