ಶಬರಿಮಲೆಗೆ ಯುವತಿಯರ ಪ್ರವೇಶನಿಲುವು ಬದಲಾವಣೆಯತ್ತ ರಾಜ್ಯ ಸರಕಾರ

ನವದೆಹಲಿ: ಶಬರಿಮಲೆ ದೇವ ಸ್ಥಾನಕ್ಕೆ ಯುವತಿಯ ಪ್ರವೇಶಕ್ಕೆ ಅನುಕೂಲಕರವಾಗಿ  2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ  ಅರ್ಜಿಗಳ ಮೇಲಿನ ವಿಚಾರಣೆಯನ್ನು ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀ ಶರ ಪೀಠ ಎಪ್ರಿಲ್ 7ರಂದು  ಕೈಗೆತ್ತ ಲಿರುವಂತೆಯೆ   ಕೇರಳ ಸರಕಾರ ಆಸ್ತಿಕರ ಜತೆಗೆ ನಿಲ್ಲಲಿದೆ ಎಂದು  ರಾಜ್ಯದ ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದಾರೆ. ಆ ಮೂಲಕ ಎಡರಂಗ ಸರಕಾರ ಯುವತಿಯರಿಗೆ ಶಬರಿಮಲೆ ಪ್ರವೇಶ ವಿಷಯದಲ್ಲಿ ಈ ಹಿಂದೆ ಹೊಂದಿದ್ದ್ದ ನಿಲುವಿನಲ್ಲಿ ಬದಲಾವಣೆ ತರುವ ಪೂರ್ವಸೂಚನೆಯನ್ನು ರಾಜ್ಯ ಸರಕಾರ ನೀಡಿದೆ. ಆಸ್ತಿಕರ ಭಾವನೆಗಳನ್ನು ಪರಿಗಣಿಸಿ ಶಬರಿಮಲೆ ದೇಗುಲದ  ಆಚಾರ ಅನುಷ್ಠಾನಗಳನ್ನು ಸಂರಕ್ಷಿ ಸಬೇಕೆಂಬ ನಿಲುವನ್ನು ವ್ಯಕ್ತಪಡಿಸುವ ಅಫಿದಾವಿತ್‌ನ್ನು ಕೇರಳ ಸರಕಾರ ಸಲ್ಲಿಸುವ ಸಾಧ್ಯತೆಯೂ ಇದೆ. ಎಡರಂಗ ಸರಕಾರ ತನ್ನ ಹಳೆ ನಿಲುವಿನಲ್ಲಿ ಇನ್ನೂ ಮುಂದುವರಿದಲ್ಲಿ ಅದು ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ತಮಗೆ ಪ್ರತಿಕೂಲವಾಗಿ ಪರಿಣಮಿಸಲಿದೆ ಎಂಬ ಸ್ಪಷ್ಟ ಮನವರಿಕೆಯು ಎಡರಂಗಕ್ಕೆ ಉಂಟಾಗಿದೆ. ಇದೇ ಸಂದರ್ಭದಲ್ಲಿ ಶಬರಿಮಲೆ ದೇಗುಲಕ್ಕೆ ಯುವತಿಯರ ಪ್ರವೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮರು ಪರಿಶೀಲನಾ ಅರ್ಜಿಗಳಿಗೆ ಕೇಂದ್ರ ಸರಕಾರವೂ ಬೆಂಬಲ ವ್ಯಕ್ತಪಡಿಸಿದೆ. ಮರು ಪರಿಶೀಲನೆಯನ್ನು ಬೆಂಬಲಿಸುವ ಪಕ್ಷಗಳು ಎಪ್ರಿಲ್ 7ರಿಂದ 9ರೊಳಗೆ ಹಾಗೂ ಮರುಪರಿಶೀಲನೆಯನ್ನು ವಿರೋಧಿಸುವ ಪಕ್ಷಗಳು ಎಪ್ರಿಲ್ 14ರಿಂದ 16ರೊಳಗೆ ವಾದಗಳನ್ನು ಮಂಡಿಸಬೇಕು. ಎಪ್ರಿಲ್ 21ರಿಂದ 22ರ ತನಕ ಮರು ಪ್ರತ್ಯಾರೋಪ ಅರ್ಜಿಗಳನ್ನು ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್‌ನ ಪೀಠ ತಿಳಿಸಿದೆ. ಈ ಎಲ್ಲಾ ಅರ್ಜಿಗಳ ವಿಚಾರಣೆಯು ಎಪ್ರಿಲ್ ೨೨ರಂದು ಮುಕ್ತಾಯಗೊಳ್ಳಲಿದೆಯೆಂದು ಪೀಠ ತಿಳಿಸಿದೆ.  ಶಬರಿಮಲೆ ತೀರ್ಪಿನ ಮರುಪರಿಶೀಲನೆಯನ್ನು ಬೆಂಬಲಿಸುವ  ಪಕ್ಷಗಳ ಪರ ವಾದಿಸಲು  ನ್ಯಾಯವಾದಿ ಕೃಷ್ಣ ಕುಮಾರ್‌ರನ್ನು ಹಾಗೂ ತೀರ್ಪಿನ ಮರುಪರಿಶೀಲನೆಯನ್ನು ವಿರೋಧಿಸುವ ಪರವಾಗಿ ವಾದಿಸಲು ನ್ಯಾಯವಾದಿ ಶಾಶ್ವತಿಯವರನ್ನು  ಸುಪ್ರೀಂಕೋರ್ಟ್ ನೋಡೆಲ್ ವಕೀಲರನ್ನಾಗಿ ನೇಮಿಸಿದೆ.  ಮಾತ್ರವಲ್ಲ ಹಿರಿಯ ವಕೀಲ ಕೆ. ಪರಮೇಶ್ವರರನ್ನು ನ್ಯಾಯಾಲಯ  ಅಮಿಕಸ್‌ರನ್ನಾಗಿಯೂ ನೇಮಿಸಿದೆ.  ಕೇರಳ  ವಿಧಾನಸಭೆಗೆ ಚುನಾವಣೆ ನಡೆಯುವ ಮೊದಲೇ ಈ ವಿಷಯದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ. ಇದು ಚುನಾವಣೆಯಲ್ಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ತೀರ್ಪು ಕೇರಳ ಸರಕಾರಕ್ಕೆ ಅತೀ ನಿರ್ಣಾಯಕವಾಗಿರಲಿದೆ.

RELATED NEWS

You cannot copy contents of this page