ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಮಟ್ಟದ ಹಿಂದೂ ಸಮಾಜೋತ್ಸವ ಮಾರ್ಚ್ ೧ರಂದು ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಮಾತೃಸಂಗಮ ನಿನ್ನೆ ಸಂಜೆ ಗಣೇಶಮಂದಿರದಲ್ಲಿ ಜರಗಿತು. ಪಂಚಾಯತ್ ಸಮಿತಿಯ ಮಾತೃಮಂಡಳಿ ಅಧ್ಯಕ್ಷೆ ಪದ್ಮ ಮೋಹನ್ದಾಸ್ ಐಲ, ಆರ್ಎಸ್ಎಸ್ ತಾಲೂಕು ಸಹ ಕಾರ್ಯವಾಹ್ ಪವನ್ ಮುಟ್ಟಮ್ ಮಾತನಾಡಿದರು. ಸ್ಥಾನೀಯ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ತಿಂಬರ, ವಾರ್ಡ್ ಪ್ರತಿನಿಧಿ ವಸಂತ ಕುಮಾರ್ ಮಯ್ಯ, ಗಣೇಶಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಉಪಸ್ಥಿತರಿದ್ದರು. ವೀಣಾ ಹರಿಶ್ಚಂದ್ರ ಬಲ್ಲಾಳ್ ಸ್ವಾಗತಿಸಿ, ವ್ಯವಸ್ಥಾ ಪ್ರಮುಖ್ ಪ್ರವೀಣ ವಂದಿಸಿದರು.







