ಯತೀಶ್ ಕುಮಾರ್ ರೈಗೆ ಡಾಕ್ಟರೇಟ್

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ನಿವೃತ್ತರಾದ ಯತೀಶ್ ಕುಮಾರ್ ರೈ ಮುಳ್ಳೇರಿಯ  ಹಂಪಿ ಕನ್ನಡ ವಿವಿಯಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದೆ. ಕರ್ನಾಟಕ ಮತ್ತು ಕೇರಳ ಕನ್ನಡ ಭಾಷಾ ಪಠ್ಯ ಪುಸ್ತಕಗಳ ತೌಲನಿಕ ಅಧ್ಯಯನ ವಿಷಯದ ಕುರಿತು ಇವರು ಪ್ರಬಂಧ ಮಂಡಿಸಿದ್ದರು. ಡಾ. ಹಾಮಾನ ಸಂಶೋಧನಾ ಕೇಂದ್ರ ಉಜಿರೆಯ ವಿದ್ಯಾರ್ಥಿಯಾಗಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ. ಇವರ ಮಾರ್ಗದರ್ಶನದಲ್ಲಿ ಇವರು ಅಧ್ಯಯನ ಕೈಗೊಂಡಿದ್ದರು. ಯತೀಶ್ ಕುಮಾರ್ ರೈ ಎಸ್‌ಎಸ್‌ಎ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿ, ಡಯೆಟ್ ಪ್ರಾಧ್ಯಾಪಕ, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಮೊದಲಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾವಿದ, ನಾಟಕ ನಟ, ನಿರ್ದೇಶಕ, ಉದ್ಘೋಷಕನಾಗಿ ಗುರುತಿಸಿಕೊಂಡಿದ್ದಾರೆ.

You cannot copy contents of this page