ವ್ಯಾಪಾರಿ ನಿಧನ

ಬಾಯಾರು: ಬಾಯಾರು ಪೆರ್ವೋಡಿ ಕುದ್ರಡ್ಕ ನಿವಾಸಿ ಹಿರಿಯ ವ್ಯಾಪಾರಿ ನಾರಾಯಣ ಪೂಜಾರಿ (68) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆ ಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮನೆ ಪರಿಸರದಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಅಶೋಕ್ ಪೂಜಾರಿ, ಅಜಿತ್ ಪೂಜಾರಿ, ಅನಿಲ್ ಪೂಜಾರಿ, ಸೊಸೆಯಂದಿ ರಾದ ಯಶ್ಚಿತ, ದೀಕ್ಷಿತ, ವಿದ್ಯಾಶ್ರೀ, ಸಹೋದರರಾದ ಐತ್ತಪ್ಪ ಪೂಜಾರಿ, ಕುಂಞಣ್ಣ ಪೂಜಾರಿ, ಸಹೋದರಿಯ ರಾದ ರಾಮಕ್ಕೆ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿಜೆಪಿ ಮುಖಂಡ ಮಣಿಕಂಠ ರೈ, ಬ್ಲೋಕ್ ಪಂ. ಸದಸ್ಯೆ ಚಂದ್ರಾವತಿ ಶೆಟ್ಟಿ, ಪೈವಳಿಕೆ ಪಂ. ಸದಸ್ಯ ರಾಮ ಏದಾರ್ ಸಹಿತ ವಿವಿಧ ರಾಜಕೀಯ ನೇತಾರರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

RELATED NEWS

You cannot copy contents of this page