ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಂ.ಎಲ್. ಅಶ್ವಿನಿ, ಕೆ. ಸುರೇಂದ್ರನ್

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧಗೊಂಡಿದ್ದು, ಅದರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸಹಿತ ಹಲವರು ಪ್ರಮುಖರ ಹೆಸರುಗಳಿರು ವುದಾಗಿ ತಿಳಿದುಬಂದಿದೆ.

ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎಂ.ಎಲ್. ಅಶ್ವಿನಿ ಪರಿಗಣನೆಯಲ್ಲಿದ್ದಾರೆ. ಅದೇ ರೀತಿ ಮಂಜೇಶ್ವರದಲ್ಲಿ  ಕೆ. ಸುರೇಂದ್ರನ್ ರನ್ನು ಸ್ಪರ್ಧೆಗಿಳಿಸಲು ನಿರ್ಧರಿಸ ಲಾಗಿದೆ.  2016ರಲ್ಲಿ ನಡೆದ ಚುನಾವಣೆಯಲ್ಲಿ ಮಂಜೇಶ್ವರ ಮಂಡಲದಲ್ಲಿ  ಸ್ಪರ್ಧಿಸಿದ್ದ ಕೆ. ಸುರೇಂದ್ರನ್ ೮೯ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2021 ರಲ್ಲಿ ಎ.ಕೆ.ಎಂ. ಅಶ್ರಫ್ 65,758 ಮತಗಳಿಸಿ ಗೆಲುವು ಸಾಧಿಸಿದ್ದರು. ಆವಾಗಲೂ ಕೆ. ಸುರೇಂದ್ರನ್ 700ರಷ್ಟು ಮತಗಳ ಅಂತರದಲ್ಲಿ ಸೋತಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಾಧ್ಯತೆಯುಳ್ಳ ಮಂಡಲಗಳಲ್ಲಿ ಮಂಜೇಶ್ವರವನ್ನು ಪಕ್ಷ  ಸೇರಿಸಿಕೊಂಡಿದೆ. ಕಳೆದ ಎರಡು ಚನಾವಣೆಗಳಲ್ಲೂ ಕೆಲವೇ ಮತಗಳ ಅಂತರದಲ್ಲಿ ಗೆಲುವು  ಕೈತಪ್ಪಿದ ಮಂಜೇಶ್ವರದಲ್ಲಿ ಈ ಬಾರಿ ಗೆಲುವು ಸಾಧಿಸಲು ಸಾಧ್ಯವಿದೆಯೆಂಬ ವಿಶ್ವಾಸವನ್ನು  ಬಿಜೆಪಿ ನಾಯಕತ್ವ ಹೊಂದಿದೆ.

ಈ ಮಂಡಲದಲ್ಲಿ ಚಿರಪರಿಚಿ ತರಾದ ಕೆ.ಸುರೇಂದ್ರನ್   ಈ ಬಾರಿಯೂ ಸ್ಪರ್ಧಿಸಿದರೆ ಗೆಲುವು ಖಚಿತವೆಂದು ಬಿಜೆಪಿ ನಿರೀಕ್ಷೆ ಹೊಂದಿದೆ. ಇದೇ ವೇಳೆ ಯುಡಿಎಫ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಲೀಗ್‌ನ ಎ.ಕೆ.ಎಂ ಅಶ್ರಫ್ ಸ್ಪರ್ಧಿಸಲಿದ್ದಾರೆನ್ನಲಾಗಿದೆ.  ಎಲ್‌ಡಿಎಫ್ ಅಭ್ಯರ್ಥಿ ಯಾರಾಗಲಿ ದ್ದಾರೆಂಬ ಬಗ್ಗೆ ನಿರ್ಧಾರವುಂಟಾಗಿಲ್ಲ. ಒಂದು ಬಾರಿ ಚೆರ್ಕಳಂ ಅಬ್ದುಲ್ಲರನ್ನು ಪರಾಭವಗೊಳಿಸಿದ ಉದುಮದ ಹಾಲಿ  ಶಾಸಕ ಸಿ.ಎಚ್. ಕುಂಞಂಬುರನ್ನು ಈ ಬಾರಿ ಮಂಜೇಶ್ವರದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆಯೆಂದು ತಿಳಿದುಬಂದಿದೆ.

You cannot copy contents of this page