ಕಾಸರಗೋಡು: ಪೂರ್ವದ್ವೇ ಷದ ಹಿನ್ನೆಲೆಯಲ್ಲಿ ವೈದ್ಯೆಯ ಕುರ್ಚಿ ಹಾಗೂ ಮೇಜಿನ ಮೇಲೆ ತುರಿಕೆಯ ಹುಡಿಯನ್ನು ಚೆಲ್ಲಿರುವುದಾಗಿ ದೂರಲಾಗಿದೆ. ಘಟನೆ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾವುಂಗಾಲ್‌ನ ಇಸಿಎಚ್‌ಎಸ್ ಆಸ್ಪತ್ರೆಯ ವೈದ್ಯೆ ಹೊಸದುರ್ಗ ಕೃಷ್ಣ ಮಂದಿರ ರಸ್ತೆಯ ಡಾ| ಟಿ.ಕೆ. ಶರ್ಮಿನ(37) ನೀಡಿದ ದೂರಿನಂತೆ ನೌಕರ ಜಯಕೃಷ್ಣನ್, ಲ್ಯಾಬ್ ಟೆಕ್ನೀಶನ್ ಅಂಜಲಿ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ದಿನ ಬೆಳಿಗ್ಗೆ ವೈದ್ಯೆಯ ತಪಾಸಣೆ ಕೊಠಡಿಯ ಕುರ್ಚಿ ಹಾಗೂ ಮೇಜಿನ ಮೇಲೆ ತುರಿಕೆ ಹುಡಿ ಸಿಂಪಡಿಸಲಾಗಿತ್ತು. ಇದನ್ನು ತಿಳಿಯದೆ ಕುರ್ಚಿಯಲ್ಲಿ ಕುಳಿತ ವೈದ್ಯೆಗೆ ಅಸಹನೀಯ ತುರಿಕೆ ಉಂಟಾಗಿದ್ದು, ಇದರಿಂದ ಸಮಗ್ರವಾಗಿ ಪರಿಶೀಲಿಸಿ ದಾಗ ತುರಿಕೆ ಹುಡಿ ಸಿಂಪಡಿಸಿರು ವುದು ಪತ್ತೆಯಾಗಿದೆ. ತುರಿಕೆಯಿಂದ ತನ್ನ ಕರ್ತವ್ಯಕ್ಕೆ ಅಡಚಣೆ ಉಂಟಾಗಿ ರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.






