ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ: ಬಾಂಗ್ಲಾದೇಶದ ಪ್ರಜೆ ಸೆರೆ

ಕೊಚ್ಚಿ: ಭಾರತೀಯ ನೌಕಾ ಪಡೆಯಲ್ಲಿ ಬೇಹುಗಾರಿಕೆ ನಡೆಸಿ ಅದರ ಗುಪ್ತ ಮಾಹಿತಿಗಳನ್ನು ಶತ್ರುರಾಷ್ಟ್ರವಾದ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಮೂಲತಃ ಬಾಂಗ್ಲಾದೇಶದ  ಪ್ರಜೆಯಾಗಿ ರುವುದಾಗಿ ಶಂಕಿಸಲಾಗುತ್ತಿರುವ ಹಾಗೂ ಪಶ್ಚಿಮ ಬಂಗಾಲದ ಬರ್ಗಾರಿಯಾದಲ್ಲಿ ವಾಸಿಸುತ್ತಿರುವ ಅಲೀಫ ಇಸ್ಲಾಂ (21) ಎಂಬಾತನನ್ನು ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸರು ಇಡುಕ್ಕಿಯಿಂದ ಬಂಧಿಸಿದ್ದಾರೆ.

ಭಾರತೀಯ ಸೇನಾ ಪಡೆಗೆ ಸೇರಿದ ಕೊಚ್ಚಿನ್ ಶಿಫ್ ಯಾರ್ಡ್‌ನ ಮಲ್ಪೆ ಘಟಕದ ಹಡಗು ನಿರ್ಮಾಣಗಳ ಬಗ್ಗೆ   ಭಾತೀಯ ನೌಕಾ ಪಡೆಯ  ಉಪಕರಣಗಳು,  ಇತರ ಚಟುವಟಿಕೆಗಳು ಹಾಗೂ ಭಾರತೀಯ ಸೇನಾ ಪಡೆಗೆ ಸಂಬಂಧಿಸಿದ ಅತ್ಯಂತ ಸಂವೇದನಾಶೀಲ ಮಾಹಿತಿಗಳನ್ನು ಅತ್ಯಂತ ಗೌಪ್ಯವಾಗಿ ಸಂಗ್ರಹಿಸಿ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನಕ್ಕೆ ಅಲೀಫ ಇಸ್ಲಾಂ ಅತೀವ ಗುಪ್ತವಾಗಿ ರವಾನಿಸುತ್ತಿದ್ದನು. ಈತ ಭಾರತೀಯ ಸೇನಾ ಪಡೆಯ ಕೊಚ್ಚಿನ್-ಮಲ್ಪೆ ಶಿಪ್ ಯಾರ್ಡ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಕಾರ್ಮಿಕನಾಗಿದ್ದಾನೆ.  ಇಡುಕ್ಕಿ ಜಿಲ್ಲೆಯ ಮರೆಯಾತ್ ಕೋವಿಲ್ ಕಟ್ಟಡದ ಬಾಡಿಗೆ ಮನೆಯಲ್ಲಿ ಈತ ಈಗ ವಾಸಿಸುತ್ತಿದ್ದು ನೌಕಾಪಡೆಗೆ ಸಂಬಂಧಿಸಿ ಸಂಗ್ರಹಿಸಲಾಗುತ್ತಿರುವ ಗೌಪ್ಯ ಮಾಹಿತಿಗಳನ್ನು ಆತ ಅಲ್ಲಿಂದಲೇ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು. ಆ  ಮನೆಯಿಂದಲೇ   ಮಲ್ಪೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೂಕ್ಷ್ಮ ಮರೈನ್ ಪ್ರೈವೆಟ್ ಲಿಮಿಟೆಡ್‌ನ ಮೂಲಕ ಕೊಚ್ಚಿನ್ ಶಿಫ್ ಯಾರ್ಡ್‌ನ ಮಲ್ಪೆ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಉತ್ತರಪ್ರದೇಶ ನಿವಾಸಿಗಳಾದ ರೋಹಿತ್, ಸಾಂಟ್ರಿ ಮತ್ತು ಗುಜರಾತ್‌ನ ಹೀರೇಂದ್ರ ಕುಮಾರ್ ಎಂಬವರನ್ನು ಮಲ್ಪೆ ಪೊಲೀಸರು ಈ ಹಿಂದೆಯೇ ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದರು. ಅದೇ ಪ್ರಕರಣದಲ್ಲಿ  ಮಲ್ಪೆ ಪೊಲೀಸರು ಈಗ ಅಲೀಫ್ ಇಸ್ಲಾಂನನ್ನು ಮರಯೂರಿನಿಂದ ಬಂಧಿಸಿದ್ದಾರೆ. ಈತ ಪಶ್ಚಿಮಬಂಗಾಲದ ನಿವಾಸಿ ಎಂದು ಹೇಳಲಾಗುತ್ತಿದ್ದರೂ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದು ತಾನು ಪಶ್ಚಿಮ ಬಂಗಾಳದವ ನೆಂಬ ಹೆಸರಲ್ಲಿ ಬಳಿಕ  ಕೇರಳಕ್ಕೆ ಬಂದು ನೆಲೆಸಿದ್ದನೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆ ಬಗ್ಗೆಯೂ ಪೊಲೀಸರು  ಹಾಗೂ ಕೇಂದ್ರ ಗುಪ್ತಚರ ವಿಭಾಗ ಇನ್ನೊಂದೆಡೆ ಪ್ರತ್ಯೇಕ ತನಿಖೆ ಆರಂಭಿಸಿದೆ. ಮಾತ್ರವಲ್ಲ ಈ   ಜಾಲದ ಪ್ರಮುಖ ಕೊಂಡಿಯಾಗಿರು ಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು ಅದರಿಂದ ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ಈತನ ಗುರುತಿನ ದಾಖಲೆಗಳು, ಮೊಬೈಲ್ ಮತ್ತು ಡಿಜಿಟಲ್ ಚಟುವಟಿಕೆಗಳನ್ನು ಪರಿಶೀಲಿಸತೊಡಗಿದೆ.

ಭಾರತೀಯ ನೌಕಾ ಪಡೆ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಲು ಬಳಸಲಾಗಿದ್ದ ಫೇಸ್‌ಬುಕ್ ಪೇಜ್‌ನ ಮಾಲಕ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ತೀವ್ರ ಶೋಧ ಆgಂಭಿಸಿದೆ. ಆತ ಸೆರೆಗೀಡಾದಲ್ಲಿ ಈ ಪ್ರಕರಣದ ಕುರಿತಾದ ಹೆಚ್ಚಿನ  ಮಾಹಿತಿಗಳು ಲಭಿಸುವ ಸಾಧ್ಯತೆ ಇದೆ.

You cannot copy contents of this page