ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್ ಕಾಮಗಾರಿ ಉದ್ಘಾಟನೆ

ದೇಲಂಪಾಡಿ: ದೇಲಂಪಾಡಿ ಪಂಚಾಯತ್‌ನ ಸಾಲತ್ತಡ್ಕ ಮಯ್ಯಳ ವಿ.ಸಿ.ಬಿ. ಕಂ ಬ್ರಿಡ್ಜ್‌ನ ಪುನರ್ ನಿರ್ಮಾಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂರು ಮಾಡಿದ ಎರಡೂವರೆ ಕೋಟಿ ರೂ.ಗಳ ಕಾಮಗಾರಿಯ ಉದ್ಘಾಟನೆಯನ್ನು ಶಾಸಕ ಸಿ.ಎಚ್. ಕುಂಞಂಬು ನೆರವೇರಿಸಿದರು. ಪಂಚಾಯತ್ ಅಧ್ಯಕ್ಷ ಎ. ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದರು. ಮೈನರ್ ಇರಿಗೇಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅನೂಪ್ ಕುಮಾರ್ ವರದಿ ಮಂಡಿಸಿದರು. ಪಂ. ಉಪಾಧ್ಯಕ್ಷೆ ಬಿ. ಶಾರದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತನ್ ಕುಮಾರ್, ಸೈರಾ ಎ.ಬಿ. ಬಶೀರ್, ಕಾರಡ್ಕ ಬ್ಲೋಕ್ ಪಂ. ಸದಸ್ಯ ಜಿ. ಗೋಪಾಲನ್, ಎ.ಪಿ. ಉಷಾ, ಎ.ಪಿ. ಕುಶಲನ್, ಸಿ.ಎಚ್. ಅಶ್ರಫ್ ಹಾಜಿ, ಕೊರಗಪ್ಪ ಮಾತನಾಡಿದರು. ಸದಸ್ಯ ಎ. ಅಬ್ದುಲ್ಲ ಸ್ವಾಗತಿಸಿ, ತಿಮ್ಮಯ್ಯ ವಂದಿಸಿದರು.

ನೆರೆ ರಾಜ್ಯವಾದ ಕರ್ನಾಟಕವನ್ನು ಸಂಪರ್ಕಿಸುವ ಸೇತುವೆಯಾಗಿದೆ ಮಯ್ಯಳ ಸೇತುವೆ. 30 ವರ್ಷದಷ್ಟು ಹಳೆಯದಾದ ಸೇತುವೆಯ ನವೀಕರಣೆಗಾಗಿ ಜನಪ್ರತಿನಿಧಿ ಗಳು ಪಂಚಾಯತ್ ಆಡಳಿತ ಸಮಿತಿ ನಿರಂತರ ಒತ್ತಡ ಹೇರಿತ್ತು. ಸೇತುವೆಯ ಶೋಚನೀಯಾವಸ್ಥೆಯಿಂದಾಗಿ ವಿಸಿಬಿಯಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗದ ಸ್ಥಿತಿ ನೆಲೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ೨೦೨೧ರ ಕೊನೆಗೆ ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಮೊತ್ತ ಮೀಸಲಿಟ್ಟು ಕಾಮಗಾರಿಗೆ ಆಡಳಿತಾನುಮತಿ ನೀಡಲಾಗಿತ್ತು.

RELATED NEWS

You cannot copy contents of this page