ಮಾಜಿ ಅನಿವಾಸಿಯ ಹಿತ್ತಿಲು ಹಾಗೂ ತಾರಸಿಯಲ್ಲಿ ತರಕಾರಿ ತೋಟ : ಹೊಸತನದ ಕೃಷಿಯಲ್ಲಿ ನೂರು ಶೇ. ಫಸಲು ಪಡೆದ ಎಂಜಿಎ ರಹ್ಮಾನ್

ಮೊಗ್ರಾಲ್: ಸುಮ್ಮನೆ ಮನೆಯಲ್ಲಿ ಕುಳಿತಿರುವಾಗ ಉದಾಸೀನತೆ ಉಂಟಾದ ಅನಿವಾಸಿ ಮನೆ ಹಾಗೂ ಮನೆಯ ತಾರಸಿಯಲ್ಲಿ ಕೃಷಿ ಕೈಗೊಂಡದ್ದು ಫಲ ನೀಡಿತು. ಇವರ ಶ್ರಮಕ್ಕೆ 100 ಶೇಕಡಾ ಫಲಿತಾಂಶ ಲಭಿಸಿದೆ. ಮೊಗ್ರಾಲ್‌ನ ಅನಿವಾಸಿ, ಸಾಮಾಜಿಕ ಕಾರ್ಯಕರ್ತನಾದ ಎಂ.ಜಿ.ಎ. ರಹ್ಮಾನ್‌ರ ಈ ಕಾರ್ಯವನ್ನು ಕಂಡು ಸ್ಥಳೀಯರು ಮೂಗಿಗೆ ಬೆರಳಿಟ್ಟರು. ಕಳೆದ ಮೂರು ದಶಕಗಳಿಂದ ದುಬಾಯಿಯ  ಪ್ರವಾಸಿ ಬದುಕು ಕೊನೆಗೊಳಿಸಿದ ಎಂಜಿಎ ರಹ್ಮಾನ್ ಊರಿಗೆ ಹಿಂತಿರುಗಿದಾಗ ಮನೆಯಲ್ಲಿ ವಿಶ್ರಾಂತಿ ವೇಳೆ ಏನಾದರೂ ಕೆಲಸ ಬೇಕಲ್ಲ ಎಂಬ ಆಲೋಚನೆಯಲ್ಲಿ ತರಕಾರಿ ತೋಟ ಮಾಡಿದರೆ ಹೇಗೆ ಎಂಬ ಚಿಂತೆ ಮೂಡಿತು. ಹಾಗೆ ಅದನ್ನು ಕಾರ್ಯರೂಪಕ್ಕೆ ತರಲು ಸಮಯ ತೆಗೆಯಲಿಲ್ಲ.  ಮನೆಯ ತಾರಸಿ ಮೇಲೆ ಕೃಷಿ ಆರಂಭಿಸಿದರು. ಅದೀಗ ಯಶಸ್ವಿಯಾದ ಸಂತೋಷದಲ್ಲಿದ್ದಾರೆ ಎಂಜಿಎ ರಹ್ಮಾನ್.

ಯಾವುದೇ ವ್ಯಕ್ತಿಗೆ ಸುಲಭದಲ್ಲಿ ತಮ್ಮ ಅಲ್ಪ ಸ್ಥಳದಲ್ಲೂ ಕೂಡಾ ಕೃಷಿ ಕೈಗೊಳ್ಳುವುದಕ್ಕೆ ಎಂಜಿಎ ರಹ್ಮಾನ್‌ರ ತರಕಾರಿ ತೋಟ ಅನುಕರಣೀಯ ವಾಗಿದೆ. ತನ್ನ ತೋಟದ ಕೊಯ್ಲು ಹಾಗೂ ಕೃಷಿ ರೀತಿಗಳನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವಾಗ ಎಂಜಿಎ ರಹ್ಮಾನ್ ಊರಿನವರಿಗೆ   ಕೃಷಿಯ ಅನುಭವವನ್ನು ಹಂಚು ವಂತಾಗುತ್ತದೆ. ಅಡುಗೆ ಮಾಡುವಾಗ ಲಭಿಸುವ ಬೂದಿಯನ್ನು ಕೃಷಿಗಾಗಿ ಇವರು ಪ್ರಧಾನವಾಗಿ ಉಪಯೋ ಗಿಸುತ್ತಾರೆ. ಮುಳ್ಳುಸೌತೆ, ಹರಿವೆ, ತೊಂಡೆಕಾಯಿ, ಟೊಮೆಟೊ, ಬಸಳೆ ಹಾಗೂ ಇನ್ನಿತರ ಸೊಪ್ಪು ತರಕಾರಿಗಳನ್ನು ಇವರು ಹೆಚ್ಚಾಗಿ ಕೃಷಿ ಮಾಡಿದ್ದಾರೆ. ಬಾಟ್ಲಿ ಕಂಪೋಸ್ಟ್ ಸಹಿತ ಕೃಷಿಯಲ್ಲಿ ಬಹಳ ಕನಿಷ್ಟ ವೆಚ್ಚದಲ್ಲಿ ಗೊಬ್ಬರ ತಯಾರಿಸುವ ನೂತನ ಕೃಷಿ ಮಾರ್ಗಗಳನ್ನು ಇವರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಕೀಟಗಳನ್ನು ದೂರ ಮಾಡಲು ವೆಚ್ಚ ಕಡಿಮೆಯ ಮಾರ್ಗಗಳನ್ನು ಉಪಯೋಗಿಸಿಕೊಳ್ಳುತ್ತಿದ್ದು, ಯಾರಿಗೆ ಬೇಕಿದ್ದರೂ ತನ್ನ ಈ ಪ್ರಯೋಗವನ್ನು ಅನುಕರಿಸಿ ವಿಷರಹಿತ ತರಕಾರಿಯನ್ನು ಪಡಕೊಳ್ಳಬಹುದೆಂದು ಇವರು ಹೇಳುತ್ತಾರೆ.

ಮಣ್ಣಿಲ್ಲದ ಕೃಷಿ (ಹೈಡ್ರೋಫೋನಿಕ್) ರೀತಿಯನ್ನು ತರಕಾರಿ ತೋಟಕ್ಕೆ ರಹ್ಮಾನ್ ಆಯ್ಕೆ ಮಾಡಿದ್ದಾರೆ. ಇದು ವಿಶ್ವದ ಸಣ್ಣ ಸಣ್ಣ ದೇಶಗಳಲ್ಲಿ ಪರೀಕ್ಷಿಸಿ ಜಯಗಳಿಸಿದ ಕೃಷಿ ರೀತಿಯಾಗಿದೆ. ಒಂದು ಎಕ್ರೆ ಸ್ಥಳದಲ್ಲಿ ಕೈಗೊಳ್ಳುವ ತರಕಾರಿ ಕೃಷಿ ಮನೆ ಹಿತ್ತಿಲಿನ 10 ಸೆಂಟ್ಸ್ ಸ್ಥಳದಲ್ಲಿ ಮಾಡಲು ಸಾಧ್ಯವಿದೆ ಎಂಬುದು ಹೈಡ್ರೋಫೋನಿಕ್ ಕೃಷಿಯ ವಿಶೇಷತೆಯಾಗಿದೆ. ಬಾಟ್ಲಿ, ಟ್ಯೂಬ್, ಪೈಪ್‌ಗಳು ಮೊದಲಾದವುಗಳನ್ನು ಉಪಯೋಗಿಸಿಕೊಂಡು ಈ ನೂತನ ಕೃಷಿ ನಡೆಸಲಾಗುತ್ತದೆ. ಎಂಜಿಆರ್ ರಹ್ಮಾನ್ ನೆಯ ಹಿತ್ತಿಲಲ್ಲಿ ತರಕಾರಿ ತೋಟ ಮಾಡಿದಾಗ ಇದನ್ನು ನೇರವಾಗಿ ಕಾಣಲು ಕುಂಬಳೆ ಕೃಷಿಭವನದಿಂದ ನೌಕರರು, ಮೊಗ್ರಾಲ್ ಶಾಲೆಯಿಂದ ಅಧ್ಯಾಪಕರು, ಪಿಟಿಎ ಸಮಿತಿಗಳು ತಲುಪಿತ್ತು. ಈ ಬಾರಿಯ ಕೃಷಿಯ ಕೊಯ್ಲು ಸಿದ್ಧತೆಯಲ್ಲಿ ಇವರಿದ್ದಾರೆ. ಕುಂಬಳೆ ಪಂಚಾಯತ್‌ನ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಈ ಬಾರಿ ಎಂಜಿಎ ರಹ್ಮಾನ್‌ರ ನಿರ್ದೇಶದ ಹಿನ್ನೆಲೆಯಲ್ಲಿ ಹೈಡ್ರೋಫೋನಿಕ್ ಕೃಷಿ ಯೋಜನೆಯನ್ನು ಸೇರಿಸಲಾಗಿದೆ. ಕೃಷಿ ವಲಯದಲ್ಲಿ ವರ್ಕಿಂಗ್ ಗ್ರೂಪ್‌ನ ಉಪಾಧ್ಯಕ್ಷನಾಗಿದ್ದಾರೆ ಎಂಜಿಎ ರಹ್ಮಾನ್.

RELATED NEWS

You cannot copy contents of this page