ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಪೆಟ್ರೋಲ್ ಬಂಕ್ ನೌಕರ ಮೃತ್ಯು

ಉಪ್ಪಳ: ಇಲಿ ವಿಷಸೇವಿಸಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಉಪ್ಪಳ ಪೆಟ್ರೋಲ್ ಬಂಕ್‌ನ ನೌಕರನೂ,  ಮಂಗಳೂರು ಅಮರ್ ಆಳ್ವ ರಸ್ತೆ,  ಶಾಂತಾ ಆಳ್ವ ಕಂಪೌಂಡ್‌ನ ಆಕೇಶ್ (25) ಮೃತಪಟ್ಟ ವ್ಯಕ್ತಿ.  ಆಕೇಶ್ ಕಳೆದ ಒಂದು ವರ್ಷದಿಂದ ಆರಿಕ್ಕಾಡಿ ಕಾಳಯಲ್ಲಿರುವ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು.  ಮಾರ್ಚ್ ೬ರಂದು ಬೆಳಿಗ್ಗೆ ಇವರು ಮನೆಯಲ್ಲಿ ಇಲಿವಿಷ ಸೇವಿಸಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸ ಲಾಗಿತ್ತು.  ಸ್ಥಿತಿ ಗಂಭೀರವಾಗಿದ್ದುದರಿಂದ  ಬಳಿಕ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆ ಮಧ್ಯೆ ಶನಿವಾರ ಸಾವು ಸಂಭವಿಸಿದೆ. ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಮಹೇಶ್-ರಾಧ ದಂಪತಿಯ ಪುತ್ರನಾದ ಮೃತರು ಸಹೋದರಿ ಆಶಿಖ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page