ಸಂಸದರಿಗೆ ಟಿಕೆಟಿಲ್ಲ: ಕಾಂಗ್ರೆಸ್‌ನಲ್ಲಿ ಅಸಂತೃಪ್ತಿ ಹೊಗೆ ತಾರಕಕ್ಕೆ

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ  ತಮ್ಮ ಯಾವುದೇ ಸಂಸದರನ್ನು ಕಣಕ್ಕಿಳಿಸುವಂತಿಲ್ಲವೆಂಬ ಅಚಲ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವುದನ್ನು ಪ್ರತಿಭಟಿಸಿ, ಕಣ್ಣೂರು ಸಂಸದ ಕೆ. ಸುಧಾ ಕರನ್ ಪ್ರತ್ಯಕ್ಷವಾಗಿ ರಂಗಕ್ಕಿಳಿದಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಇತರ ಸಂಸದರ ಪೈಕಿ ಶಶಿ  ತರೂರ್, ಎಂ.ಕೆ. ರಾಘವನ್ ಮತ್ತು ಅಡೂರ್ ಪ್ರಕಾಶ್ ಕೂಡಾ ಅಸಂತೃಪ್ತಿ ವ್ಯಕ್ತಪಡಿಸಿ ರಂಗಕ್ಕಿಳಿದಿದ್ದಾರೆ.

ಅಭ್ಯರ್ಥಿಗಳ ನಿರ್ಣಯ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಪಕ್ಷ ಕೇಳಿಲ್ಲವೆಂದು ತಿರುವನಂತಪುರ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಮಾತ್ರವಲ್ಲ ಅಭ್ಯರ್ಥಿಗಳ ಯಾದಿ ಬಗ್ಗೆ ಅವರು ಅಸಂತೃಪ್ತಿಯನ್ನು ವ್ಯಕ್ತಪಡಿಸಿ ದ್ದಾರೆ.  ಕಲ್ಲಿಕೋಟೆ ಕ್ಷೇತ್ರದ ಸಂಸದ ಎಂ.ಕೆ. ರಾಘವನ್ ಕೂಡಾ ಇನ್ನೊಂ ದೆಡೆ ರಂಗಕ್ಕಿಳಿದಿದ್ದು, ಕಲ್ಲಿಕೋಟೆ ನೋರ್ತ್ ಅಥವಾ ಏಲತ್ತೂರ್ ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವುದಾದರೊಂದರಲ್ಲಿ  ಸ್ಪರ್ಧಿಸುವ ಒಲವನ್ನು ನಾನು ಹೊಂದಿದ್ದೇನೆ. ಅದನ್ನು ನಾನು ಪಕ್ಷದ ಕೇಂದ್ರ ನೇತೃತ್ವಕ್ಕೆ  ಈ ಹಿಂದೆ ತಿಳಿಸಿದ್ದೆ. ಆದರೆ ಅದನ್ನು ಪಕ್ಷ ಪರಿಗಣಿಸಿಲ್ಲ.

ಈ ಕ್ಷೇತ್ರದಲ್ಲಿ ನಾನು ಸ್ಪರ್ಧಿಸದಿ ದ್ದಲ್ಲಿ ನನ್ನ ನೋಮಿನಿಗಳನ್ನು ಕಣಕ್ಕಿಳಿ ಸಬೇಕೆಂಬ ಹೊಸ ಬೇಡಿಕೆಯನ್ನೂ ಅವರು ಈಗ ಮುಂದಿರಿಸಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್‌ನ ಇನ್ನೋರ್ವ ಸಂಸದ ಅಡೂರ್ ಪ್ರಕಾಶ್ ಕೂಡಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ವ್ಯಕ್ತಪಡಿಸಿದ್ದರೂ, ಅವರಿಗೂ ಪಕ್ಷ ಟಿಕೆಟ್ ನಿರಾಕರಿಸಿದೆ. ಅದು ಅವರನ್ನು ತೀವ್ರ ಅಸಂತೃಪ್ತಿ ಗೊಳಪಡಿಸಿದೆ.

ಇದೇ ವೇಳೆ ಸೀಟಿನ ವಿಷಯದಲ್ಲಿ ಪಕ್ಷದೊಂದಿಗೆ ಸೆಣಸಿ ನಿಂತಿರುವ ಕೆ. ಸುಧಾಕರನ್‌ರ ಮನವೊಲಿಸಲು  ಕಾಂ ಗ್ರೆಸ್ ಕೇಂದ್ರ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೇರವಾಗಿ ಸುಧಾಕರನ್‌ರನ್ನು ಕಂಡು ಮಾತುಕತೆ ಆರಂಭಿಸಿದ್ದಾರೆ. ಆದರೆ ತನ್ನ ಬಿಗು ನಿಲುವನ್ನು ಸಡಿಲಿಸಲು ಸುಧಾಕರನ್ ಇನ್ನೂ ತಯಾರಾಗಿಲ್ಲವೆನ್ನಲಾಗಿದೆ.

RELATED NEWS

You cannot copy contents of this page