ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಯುವಕ ಮೃತ್ಯು: ಕಾರು ಚಾಲಕನ ವಿರುದ್ಧ ನರಹತ್ಯಾ ಪ್ರಕರಣ ದಾಖಲು

ಕಾಸರಗೋಡು: ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಚಿತ್ತಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಲಪ್ಪುರಂ ಒಳುಕ್ಕೂರು ಪಲಿತ್ತಲ ಎಂಬಲ್ಲಿನ ಶಂಕರನ್‌ರ ಪುತ್ರ ಪಿ. ಅಖಿಲೇಶ್ (38)  ಮೃತಪಟ್ಟ ವ್ಯಕ್ತಿ.  ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ಕಾಞಂಗಾಡ್ ಅಲಾಮಿಪಳ್ಳಿಯ ಎಚ್. ಉಲ್ಲಾಸ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ೧೧.೩೦ರ ವೇಳೆ ಕಾಸರಗೋಡು ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರು ಅಖಿಲೇಶ್ ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರಗಾ ಯಗೊಂಡ ಅಖಿಲೇಶ್‌ರನ್ನು ಸ್ಥಳೀಯರು ಕೂಡಲೇ ಅಧಿಞ್ಞಾ ಲ್‌ನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸ್ಥಳಕ್ಕೆ ತಲುಪಿದ ಹೊಸದುರ್ಗ ಎಸ್‌ಐ ಸಿ.ಜಿ. ಸಾಮ್‌ಸನ್ ನೇತೃತ್ವದ ತಂಡ ಉಲ್ಲಾಸ್‌ನನ್ನು ಕಸ್ಟಡಿಗೆ ತೆಗೆದಿದೆ. ಈತನನ್ನು ಜಿಲ್ಲಾಸ್ಪತ್ರೆಗೆ ತಲುಪಿಸಿ ತಪಾಸಣೆಗೊಳಪಡಿಸಿದಾಗ ಮದ್ಯದಮಲಿನಲ್ಲಿದ್ದನೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಉಲ್ಲಾಸ್‌ನ ವಿರುದ್ಧ ಪೊಲೀಸರು ನರಹತ್ಯಾ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

RELATED NEWS

You cannot copy contents of this page