ಸಮಗ್ರ 2026: 100 ದಿನ ಕ್ರಿಯಾ ಯೋಜನೆ  ಮುಖ್ಯಮಂತ್ರಿಯಿಂದ ಉದ್ಘಾಟನೆ ನಾಳೆ

ತಿರುವನಂತಪುರ: ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಾದ ಸಮಗ್ರ 2026 ಮುಖ್ಯಮಂತ್ರಿ ವಿ.ಡಿ. ಸತೀಶನ್ ನಾಳೆ ಉದ್ಘಾಟಿಸುವರು. 15,೦೦೦ ಫಲಾನುಭವಿಗಳಿಗೆ 100 ಕೋಟಿ ರೂ.ಗೂ ಮಿಕ್ಕಿದ ಸಾಲ ಇದೇ ವೇಳೆ ಮುಖ್ಯಮಂತ್ರಿ ವಿತರಿಸುವರು ಎಂದು ಸಚಿವೆ ಕೆ.ಎ. ತುಳಸಿ ತಿಳಿಸಿದ್ದಾರೆ. ರಾಜ್ಯ ಸರಕಾರದ 100 ದಿನ ಕ್ರಿಯಾ ಯೋಜನೆಯಂಗವಾಗಿ ರಾಜ್ಯ ಹಿಂದುಳಿದ ವಿಭಾಗ ಅಭಿವೃದ್ಧಿ ಕಾರ್ಪೊರೇಷನ್ ಜ್ಯಾರಿಗೊಳಿಸುವ ಕಾರ್ಯಕ್ರಮದ, ವಿವಿಧ ಕ್ಷೇಮ ಯೋಜನೆಗಳ ರಾಜ್ಯ ಮಟ್ಟದ ಉದ್ಘಾಟನೆ ಕೂಡಾ ನಾಳೆ ಕೊಚ್ಚಿಯಲ್ಲಿ ನಡೆಯಲಿದೆ.

ಪಳ್ಳುರುತ್ತಿ ಎಸ್.ಎನ್. ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಪರಿಶಿಷ್ಟ ಜಾತಿ- ಪರಿಶಿಷ್ಚ ಪಂಗಡ- ಹಿಂದುಳಿದ ಕ್ಷೇಮ ಇಲಾಖೆಗಳ 100 ದಿನ ಕ್ರಿಯಾ ಯೋಜನೆಯಲ್ಲಿ ೩೧ ಯೋಜನೆಗಳನ್ನು ಸೇರಿಸಿಕೊಳ್ಳಲಾಗಿದೆ. ಇದರಲ್ಲಿ ಮೂರು ಯೋಜನೆಗಳು ಹಿಂದುಳಿದ ವಿಭಾಗ ಅಭಿವೃದ್ಧಿ ಕಾರ್ಪೊರೇಷನ್ ಜ್ಯಾರಿಗೊಳಿಸಲಿದೆ. ಈ ಯೋ ಜನೆ ಯಂತೆ 100ದಿನದೊಳಗೆ 16,೦೦೦ ಫಲಾನುಭವಿಗಳಿಗೆ 2೦೦ ಕೋಟಿ ರೂ. ಸಾಲ ವಿತರಿಸಲಾಗು ವುದು. ಮಹಿಳಾ ಸಬಲೀಕರಣಕ್ಕಾಗಿ ಬಡ್ಡಿ ರಹಿತ ಸೂಕ್ಷ್ಮ ಹಾಗೂ ಕಿರು ಉದ್ಯಮಿಗಳಿಗೆ ಪ್ರಿಯ ದರ್ಶಿನಿ ಯೋ ಜನೆ, ಸೇವೆಯಿಂದ ನಿವೃತ್ತರಾದವರಿಗಿರುವ ಸೀನಿಯರ್ ಸೆಕ್ಯೂವರ್ ಸಾಲ ಯೋಜನೆ  ಘೋಷಣೆ ನಡೆಯಲಿದೆ. ಸಮಗ್ರದ ಮುಂದಿನ ಕಾರ್ಯಕ್ರಮ ಸೆಪ್ಟಂಬರ್ ನಲ್ಲಿ ಪಾಲಕ್ಕಾಡ್‌ನಲ್ಲಿ ಜರಗಲಿದೆ.

You cannot copy contents of this page