ಮೊಟ್ಟೆ ವ್ಯಾಪಾರದ ಮರೆಯಲ್ಲಿ ಎಂಡಿಎಂಎ ಮಾರಾಟ: ಯುವಕ ಸೆರೆ

ಕಾಸರಗೋಡು: ಮೊಟ್ಟೆ ಮಾರಾ ಟದ ಮರೆಯಲ್ಲಿ ಮಾದಕ ಪದಾರ್ಥ ಮಾರಾಟ ನಡೆಸಿದ ಯುವಕ ಸೆರೆಯಾಗಿ ದ್ದಾನೆ. ನೀಲೇಶ್ವರ ಚಿರಪ್ಪುರ ನಿವಾಸಿ ಅಮೀರ್ (೪೦) ಸೆರೆಯಾದ ವ್ಯಕ್ತಿ. ರಹಸ್ಯ ಮಾಹಿತಿ ಲಭಿಸಿದ ಹಿನ್ನೆಲೆ ಯಲ್ಲಿ ನೀಲೇಶ್ವರ ಇನ್ಸ್‌ಪೆಕ್ಟರ್ ಕೆ. ಮುರಳೀ ಧರನ್‌ರ ನಿರ್ದೇಶ ಪ್ರಕಾರ ಎಸ್‌ಐ ಕೆ.ವಿ. ರತೀಶ್ ಹಾಗೂ ತಂಡ ಆರೋಪಿ ಯನ್ನು ಸೆರೆ ಹಿಡಿದಿದೆ. ನಿನ್ನೆ ಸಂಜೆ ಯುವಕನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಮಂಚದಡಿಯಲ್ಲಿ ಬಚ್ಚಿಟ್ಟಿದ್ದ ೧ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. 
ಅಮೀರ್ ಮಾದಕ ಪದಾರ್ಥ ಮಾರಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕಳೆದ ಒಂದು ತಿಂಗಳಿನಿಂದ ಈತನನ್ನು ಪೊಲೀಸರು ನಿರೀಕ್ಷಿಸುತ್ತಿದ್ದರು.

You cannot copy contents of this page