ನಿಲ್ಲಿಸಿದ್ದ ಲಾರಿ ಕಳವುಗೈದ ಇಬ್ಬರ ಬಂಧನ

ಕುಂಬಳೆ: ಬಂದ್ಯೋಡು ಬಳಿಯ ಅಡ್ಕದಿಂದ ಲಾರಿಯನ್ನು ಕಳವುಗೈದ ಪ್ರಕರಣದ ಆರೋಪಿ ಗಳನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕಳವಿಗೀಡಾದ ಲಾರಿಯನ್ನು ಸೀತಾಂಗೋಳಿ ಬಳಿಯಿಂದ ಪತ್ತೆಹಚ್ಚಲಾಗಿದೆ.  ಕೊಡ್ಯಮ್ಮೆ ಇಚ್ಲಂಪಾಡಿ ಮುಳಿಯಡ್ಕ ನಿವಾಸಿ ಅಬ್ದುಲ್ಲ ಎ.ಪಿ. (32), ಎಡನಾಡು ಮುಕಾರಿಖಂಡದ ಮೊಹಮ್ಮದ್ ರಿಸ್ವಾನ್ (27) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐ ಸನಿತ್ ಎಂಬಿವರು ಬಂಧಿಸಿದ್ದಾರೆ.

ಅಡ್ಕ ಝಡ್‌ಎಂಎಸ್ ಫಿಶ್ ಸರ್ವೀಸ್ ಕಚೇರಿಯ ಮುಂಭಾಗ ದಲ್ಲಿ  ಲಾರಿಯನ್ನು ಮಾರ್ಚ್ 21ರಂದು ರಾತ್ರಿ ನಿಲ್ಲಿಸಲಾಗಿತ್ತು. 22ರಂದು ಬೆಳಿಗ್ಗೆ 8.30ರ ವೇಳೆ ನೋಡಿದಾಗ ಲಾರಿ ಅಲ್ಲಿ ನಾಪತ್ತೆಯಾಗಿತ್ತು. ಈ ಬಗ್ಗೆ ಮಂಗಲ್ಪಾಡಿ ಅಡ್ಕ ಶಮೀಮ ಮಂಜಿಲ್‌ನ ಝಕರಿಯ ಎಂ. ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಲಾರಿಯನ್ನು ಕಳವುಗೈದು ಸಾಗಿಸಿರುವುದಾಗಿ ಪೊಲೀಸರಿಗೆ ಸ್ಪಷ್ಟಗೊಂಡಿದೆ. ಈ ಹಿನ್ನೆಲೆಯಲ್ಲಿ ಸಿಸಿ ಟಿವಿ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಎಡನಾಡ್‌ನ ರಸ್ತೆ ಬದಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಲಾರಿ ಪತ್ತೆಯಾಗಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.  ಬಂಧಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಅವರಿಗೆ ರಿಮಾಂಡ್ ವಿಧಿಸಲಾಗಿದೆ. ಲಾರಿಯನ್ನು ಜಿಪಿಎಸ್ ವಿಚ್ಛೇಧಿಸಿ ಕಳವುಗೈಯ್ಯ ಲಾಗಿತ್ತು. ಯಾವ ಉದ್ದೇಶದಿಂದ ಆರೋಪಿಗಳು ಲಾರಿಯನ್ನು ಕಳವು ನಡೆಸಿದ್ದಾರೆಂದು ತಿಳಿಯಲು ಸಮಗ್ರ ತನಿಖೆ ಅಗತ್ಯವಿದೆ. ಆದ್ದರಿಂದ ಆರೋಪಿಗಳನ್ನು ರಿಮಾಂಡ್‌ನಿಂದ ಕಸ್ಟಡಿಗೆ ಪಡೆದು ತನಿಖೆ ಗೊಳಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page