ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಂಗವಾಗಿ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ರವರ ಪ್ರಚಾರದ ನಿಮಿತ್ತ ನಾಳೆ ತಿರುವನಂತಪುರ ಮೇಯರ್ ವಿ.ವಿ ರಾಜೇಶ್ ಮಂಜೇಶ್ವರಕ್ಕೆ ಆಗಮಿಸುವರು. ಬೆಳಿಗ್ಗೆ 11ಗಂಟೆಗೆ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಗಳ ಸಮಾವೇಶ ಸೋಂಕಾಲು ಎನ್.ಡಿ.ಎ ಚುನಾವಣಾ ಕಚೇರಿಯಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕುಂಬಳೆ ಪೇಟೆಯಲ್ಲಿ ಅಭ್ಯರ್ಥಿ ಕೆ.ಸುರೇಂದ್ರನ್‌ರ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ.





