ಹೊಳೆಯಿಂದ ಅನಧಿಕೃತ ಹೊಯ್ಗೆ ಸಾಗಾಟ ವಿರುದ್ಧ ಕಠಿಣ ಕ್ರಮ: ಪಾಚಾಣಿಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ವಶ; ಇಬ್ಬರ ಬಂಧನ; ಕಳವು ಪ್ರಕರಣ ದಾಖಲು

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಲಾರಿಯ ಚಾಲಕ ಚೇಪಿನಡ್ಕ ಮದೀನ ಮಂಜಿಲ್‌ನ ಮೊಯ್ದೀನ್ ಕುಂಞಿ (32) ಹಾಗೂ ಮಾಲಕ ವಳಯಂನ ಕಬೀರ್ (44) ಎಂಬಿವರನ್ನು ಬಂಧಿಸಲಾಗಿದೆ. ಈ ಪೈಕಿ ಮೊಯ್ದೀನ್ ಕುಂಞಯನ್ನು ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಈ ವೇಳೆ ಈತನಿಗೆ ರಿಮಾಂಡ್ ವಿಧಿಸಲಾಗಿದೆ. ಕಬೀರ್‌ನನ್ನು ಇಂದು  ನ್ಯಾಯಾ ಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಸಂಜೆ ಮುಗುರೋಡ್ ಪಾಚಾಣಿಯ ಹೊಳೆ ಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಾಟ ನಡೆಸುತ್ತಿದ್ದ ವೇಳೆ ಕುಂಬಳೆ ಇನ್‌ಸ್ಪೆಕ್ಟರ್ ಬೈಜು ಕೆ ಥೋಮಸ್‌ರ ನಿರ್ದೇಶದಂತೆ ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್  ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಾದ ಇಬ್ಬರ ವಿರುದ್ಧ ಹೊಯ್ಗೆ  ಕಳವು ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವವರ ವಿರುದ್ಧ ಕಳವು ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವುದಾಗಿ ಈ ಹಿಂದೆಯೇ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದರು. ಆದರೂ ಹೊಯ್ಗೆ ಸಾಗಾಟ ನಿರಂತರ ಮುಂದುವರಿದ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿ ದ್ದಾರೆ. ಅದೇ ರೀತಿ ಹೊಳೆಗೆ ರಸ್ತೆ ಸೌಕರ್ಯವೊದಗಿಸುವವರ, ಹೊಯ್ಗೆ ಸಾಗಾಟ ವಾಹನಗಳಿಗೆ ಬೆಂಗಾವಲು ಏರ್ಪಡಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಹೊಯ್ಗೆ ಸಾಗಾಟ ತಡೆಯಲು ನಾಗರಿಕರ ಸಹಾಯವನ್ನು ಪೊಲೀಸರು ಯಾಚಿಸಿದ್ದಾರೆ.

ಇದೇ ವೇಳೆ ಪಾಚಾಣಿ, ತಲ್ಪಾರ, ಇಚ್ಲಂಗೋಡು, ವಳಯಂ,ಉಳು ವಾರು ಎಂಬಿಡೆಗಳ ಹೊಳೆಗಳಿಂದ ಹೊಯ್ಗೆ ಸಾಗಾಟ ವ್ಯಾಪಕಗೊಂಡಿರು ವುದಾಗಿ ಮಾಹಿತಿ ಲಭಿಸಿದೆ. ಅದರ ಹಿಂದೆ ಕಾರ್ಯವೆಸಗುತ್ತಿರುವವರ ವಿರುದ್ಧವೂ ಕ್ರಮಕೈಗೊಳ್ಳ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page