ಕುಂಬಳೆ: ನಾಡಿನ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾ ರಿಯಿಲ್ಲವೇ ಎಂದು ನಾಗರಿಕರು ಪ್ರಶ್ನಿಸ ತೊಡಗಿ ದ್ದಾರೆ. ನಾಡಿನಲ್ಲಿ ಪರಿಹರಿಸ ಲಾಗದ ಹಲವು ಸಮಸ್ಯೆಗಳಿದ್ದು, ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ನಾಗರಿಕರು ಈ ಬಗ್ಗೆ ಪ್ರಶ್ನಿಸುತ್ತಿರುವು ದು ರಾಜಕೀಯ ಪಕ್ಷ ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕುಂಬಳೆ ಪೇರಾಲ್ ವಾರ್ಡ್ನ ‘ತಾಯಲ್’ ಶಾಲೆ ರಸ್ತೆಯನ್ನು ಸಂಚಾರಯೋಗ್ಯಗೊಳಿಸಬೇಕೆಂದು ನಾಗರಿಕರು ಕಳೆದ ಎರಡು ದಶಕಗಳಿಂದಲೇ ಬೇಡಿಕೆ ಮುಂದಿರಿಸಿ ದ್ದಾರೆ. ಹಲವು ವರ್ಷಗಳಿಂದ ಮರು ಡಾಮರೀಕರಣ ನಡೆಯದ ಈ ರಸ್ತೆ ಇದೀಗ ಶೋಚನೀಯ ಸ್ಥಿತಿಯಲ್ಲಿದೆ. ಪ್ರತೀ ವರ್ಷ ಈ ರಸ್ತೆಯ ದುಸ್ಥಿತಿಯ ಕುರಿತು ಪಂಚಾಯತ್ ಅಧಿಕಾರಿಗಳ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತರಲಾಗುತ್ತಿದ್ದು, ಈ ವೇಳೆ ಅವರಿಂದ ಬರುವ ಉತ್ತರ “ಫಂಡ್ ಮೀಸಲಿರಿಸಲಾಗಿದೆ” ಎಂಬುದೇ ಆಗಿದೆ. ಆದರೆ ಆ ಫಂಡ್ ಎಲ್ಲಿಗೆ ಹೋಯಿತು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಪೇರಾಲ್ ಜಿಜೆಬಿಎಸ್ ಶಾಲೆಗೆ ತೆರಳುವ ತಾಯಲ್ ರಸ್ತೆ ಹೊಂಡಗಳಿಂದ ತುಂಬಿಕೊಂಡಿದೆ. ಅಗಲಕಿರಿದಾದ ಈ ರಸ್ತೆಯ ಒಂದು ಭಾಗದಲ್ಲಿ ೨೦೦ ಅಡಿಯಷ್ಟು ಆಳದ ಹೊಂಡವಿದೆ. ಇದಕ್ಕೆ ಸಂರಕ್ಷಣಾ ಬೇಲಿ ನಿರ್ಮಿಸಿಲ್ಲ. ನೂರಾರು ವಿದ್ಯಾರ್ಥಿಗಳ ಸಹಿತ ನಾಗರಿಕರು ನಡೆದು ಹೋಗುವ ಈ ರಸ್ತೆಯಲ್ಲಿ ಎರಡೂ ಭಾಗದಿಂದ ವಾಹನಗಳು ಬಂದರೆ ಭಯದಿಂದಲೇ ನಾಗರಿಕರು ನಡೆದಾಡಬೇಕಾದ ಸ್ಥಿತಿಯಿದೆ. ಚಾಲಕರ ಗಮನ ಅಲ್ಪ ತಪ್ಪಿದರೆ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಭೀತಿ ಕೂಡಾ ಉಂಟಾಗುತ್ತಿದೆ. ರಸ್ತೆ ಅಗಲಕಿರಿದಾಗಿ ರುವುದರಿಂದ ವಾಹನಗಳು ಬಂದಾಗ ವಿದ್ಯಾರ್ಥಿ ಗಳು ಸಹಿತ ಪಾದಚಾರಿಗಳಿಗೆ ಬದಿಗೆ ಸರಿದು ನಿಲ್ಲಲು ಸಾಧ್ಯವಾಗು ತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ಬಸ್ನಲ್ಲಿ ಶಾಲೆಗೆ ನೂರಾರು ಮಂದಿ ಮಕ್ಕಳು ಪ್ರಯಾಣಿಸುತ್ತಿದ್ದಾರೆ.
ರಸ್ತೆಯ ಶೋಚನೀಯಾವ ಸ್ಥೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸದಿದ್ದರೇನು ಎಂಬ ಬಗ್ಗೆ ನಾಗರಿಕರು ಆಲೋಚಿಸುತ್ತಿದ್ದಾರೆ. ಪ್ರಾದೇಶಿಕ ವಿಷಯಗಳನ್ನು ಮುಂದಿರಿಸಿ ಮತದಾನವನ್ನು ಬಹಿಷ್ಕರಿಸಲು ಕರೆ ನೀಡಿದರೆ ರಾಜಕೀಯ ಪಕ್ಷಗಳಿಗೆ ಅದು ಭಾರೀ ತಿರುಗೇಟಾಗಲಿದೆ. ಕಳೆದವಾರ ಪೇರಾಲ್ನಲ್ಲಿ ವಾರ್ಡ್ ವಿಭಜನೆಯಲ್ಲಿ ಒಂದು ಭಾಗದ ಮತದಾರರನ್ನು ಕೆ.ಕೆ.ಪುರಂ ವಾರ್ಡ್ಗೆ ಬದಲಾ ಯಿಸಿರುವುದನ್ನು ಪ್ರತಿಭಟಿಸಿ ಮತದಾನವನ್ನು ಬಹಿಷ್ಕರಿಸಲು ಕರೆ ನೀಡಿ ಪೇರಾಲ್ನಲ್ಲಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸಿರುವುದು ಭಾರೀ ಸುದ್ದಿಯಾಗಿತ್ತು.





