ಕಾಸರಗೋಡು: ನಗರದ ಏರ್ಲೈನ್ಸ್ ವಸತಿಗೃಹದಲ್ಲಿ ನಾಲ್ಕು ದಶಕಗಳ ಕಾಲ ಉಡುಪಿ ಹೋಟೆಲ್ ನಡೆಸುತ್ತಿದ್ದ ಎ. ಸದಾಶಿವ ಉಡುಪ (94) ನಿಧನ ಹೊಂದಿದರು. ಕಟೀಲು ನಿವಾಸಿಯಾದ ಇವರು ಮಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷನಾಗಿದ್ದರು. ಸಂಘಟನೆಯ ರಾಜ್ಯ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯ, ಜಿಲ್ಲಾ ಗೌರವಾಧ್ಯಕ್ಷ, ಕಾಸರಗೋಡು ವೆಂಕಟ್ರಮಣ ಕ್ಷೇತ್ರ ಸಮೀಪದ ಸ್ವಾಮೀ ರಾಘವೇಂದ್ರ ಮಠ ಸ್ಥಾಪಕ ಅಧ್ಯಕ್ಷ, ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಇದರ ಸ್ಥಾಪಕ ಸದಸ್ಯ, ರಕ್ಷಾಧಿಕಾರಿ, ಕಾಸರಗೋಡು ವಲಯ ಅಧ್ಯಕ್ಷ ಮೊದಲಾದ ಪದವಿಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಶಾಂತ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರವಿಪ್ರಸಾದ, ಲಕ್ಷ್ಮೀಶ, ಶಶಿಧರ, ಚಂದ್ರಿಕ, ರಾಧಿಕ, ಸೊಸೆಯಂದಿರಾದ ಕುಮುದ, ಲತ, ಪ್ರತಿಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಂತಾಪ ಸೂಚಿಸಿದೆ.






