ಅಭಿವೃದ್ಧಿಯಲ್ಲಿ ಮಾತ್ರವಲ್ಲ ಕ್ರೀಡಾರಂಗದಲ್ಲೂ ಮಂಜೇಶ್ವರ ಮಂಡಲದ ಕಡೆಗಣನೆ- ಪಿ.ಟಿ. ಉಷಾ

ಹೊಸಂಗಡಿ: ಮಂಜೇಶ್ವರ ಅಭಿವೃದ್ಧಿಯಲ್ಲಿ ಮಾತ್ರವಲ್ಲ, ಕ್ರೀಡಾರಂಗದಲ್ಲಿಯೂ ಸಂಪೂರ್ಣ ಕಡೆಗಣಿಸಲ್ಪಟ್ಟ ಮಂಡಲವಾಗಿದ್ದು, ಇಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ಅಭ್ಯಾಸ ನಡೆಸಲು ಮೈದಾನಗಳಿಲ್ಲ, ಅಂತಾ ರಾಷ್ಟ್ರೀಯ ಮಾನ್ಯತೆಯ ಸ್ಟೇಡಿಯಂ ಗಳಿಲ್ಲವೆಂದು ರಾಜ್ಯಸಭಾ ಸದಸ್ಯೆ, ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪದ್ಮಶ್ರೀ ಪಿ.ಟಿ. ಉಷಾ ನುಡಿದರು. ಹೊಸಂಗಡಿ ಪ್ರೇರಣಾದಲ್ಲಿ ಕ್ರೀಡಾಭಾರತಿ ಕಾಸರಗೋಡು ಹಮ್ಮಿಕೊಂಡ  ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾಷಾ ಪ್ರಾವೀಣ್ಯತೆಯ ಮಂಜೇಶ್ವರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಳುಗಳು ತಯಾರಾಗುತ್ತಿಲ್ಲ, ಪ್ರತಿಭಾವಂತ ಯುವ ಕ್ರೀಡಾಪಟುಗಳಿಗೆ ತರಬೇತಿ ಲಭಿಸುತ್ತಿಲ್ಲವೆಂದು ಅವರು ಆಪಾದಿಸಿದರು. ಮೀರಾ ಟೀಚರ್ ಅಧ್ಯಕ್ಷತೆ ವಹಿಸಿದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶ್ರೀಕಾಂತ್, ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್, ಎ.ಕೆ. ಕಯ್ಯಾರ್, ಸಮಂತ ಶೆಟ್ಟಿ ಉಪಸ್ಥಿತರಿದ್ದರು. ಆದರ್ಶ್ ಬಿ.ಎಂ. ಸ್ವಾಗತಿಸಿ, ಸುನಿಲ್ ಅನಂತಪುರ ವಂದಿಸಿದರು.

RELATED NEWS

You cannot copy contents of this page