ಸಿದ್ಧರಾಮಯ್ಯ ನಾಳೆ ಮುಳ್ಳೇರಿಯಕ್ಕೆ

ಮುಳ್ಳೇರಿಯ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರ ಪರವಾಗಿ ಮತ ಯಾಚಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆ ಮುಳ್ಳೇರಿಯಕ್ಕೆ ತಲುಪುವರು. ಸಂಜೆ ೫ ಗಂಟೆಗೆ ಜರಗುವ ಸಭೆಯಲ್ಲಿ ಅವರು ಮಾತನಾಡುವರು. ಕಾಸರಗೋಡು ವಿಧಾನಸಭಾ ಮಂಡಲ ಐಕ್ಯರಂಗ ಚುನಾವಣಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ ಕೇರಳ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಇಂದು ಜಿಲ್ಲೆಗೆ ತಲುಪಿದರು. ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿ ನಡೆದ ಐಕ್ಯರಂಗದ ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಿದರು. ಬಳಿಕ ಬೋವಿಕ್ಕಾನ ಪೇಟೆಯಲ್ಲಿ ನಡೆದ ಉದುಮ ವಿಧಾನಸಭಾ ಮಂಡಲ ಐಕ್ಯರಂಗದ ಚುನಾವಣಾ ಸಾರ್ವಜನಿಕ ಸಭೆಯನ್ನು ಅವರು ಉದ್ಘಾಟಿಸಿದರು.

RELATED NEWS

You cannot copy contents of this page